ಬೆಂಗಳೂರು: ಮಿನಿ ಅಂಗನವಾಡಿಗಳ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಪದಾಧಿಕಾರಿಗಳೊಂದಿಗಿನ ಮಾತುಕತೆ ಸಂದರ್ಭದಲ್ಲಿ ತೀರ್ಮಾನಿಸಿದಂತೆ, ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಡ್ತಿ ನೀಡಲು ನಿರ್ಧರಿಸಿದೆ.
ಮೊದಲ ಹಂತದಲ್ಲಿ ಮುಖ್ಯ ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ ಹುದ್ದೆಗಳಿಗೆ ಮಾತ್ರ ಬಡ್ತಿ ಸಿಗಲಿದ್ದು. ಇದರ ಜೊತೆಗೆ ಅಂಗನವಾಡಿ ಕಟ್ಟಡಕ್ಕಾಗಿ ನೀಡುತ್ತಿದ್ದ ಬಾಡಿಗೆ ಮೊತ್ತವನ್ನೂ ಹೆಚ್ಚಿಸಲಾಗಿದೆ.
ಈ ಹಿಂದೆ 700 ರೂ. ಇದ್ದ ಬಾಡಿಗೆಯನ್ನು 1,000 ಕ್ಕೆ, 3 ಸಾವಿರದಿಂದ 4 ಸಾವಿರಕ್ಕೆ ಹಾಗೂ 5 ಸಾವಿರದಿಂದ 6 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ವಿಳಂಬವಾಗುತ್ತಿರುವ ಸಂಬಳದ ಸಮಸ್ಯೆಯನ್ನು ಬಗೆಹರಿಸಲೂ ಸರ್ಕಾರ ಮುಂದಾಗಿದೆ.