Monday, November 25, 2024
ಪುತ್ತೂರುಸುದ್ದಿ

ಇಂದಿನಿಂದ ಜ. 19ರವರೆಗೆ “ದೈವೊಲೆನ ಸಿರಿಸಿಂಗಾರದ ಮೆಚ್ಚಿ” ಪಡುಮಲೆ ಶ್ರೀ ಉಳ್ಳಾಕುಲು (ಅರಸು ದೈವಗಳು) ದೈವಗಳ ಆದಿ ನೆಲೆ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೊತ್ಸವ – ಕಹಳೆ ನ್ಯೂಸ್

ಪುತ್ತೂರು: ಶ್ರೀ ಉಳ್ಳಾಕುಲು ದೈವಗಳ ಆದಿನೆಲೆ ಪಡುಮಲೆಯಲ್ಲಿ ನೇಮೊತ್ಸವ ಉಳ್ಳಾಕುಲು ವ್ಯಾಘ್ರಚಾಮುಂಡಿ ದೈವಸ್ಥಾನ ಪಡುಮಲೆಯ ವಾರ್ಷಿಕ ನೇಮೊತ್ಸವ ಜ.14ರಿಂದ 19ರವರೆಗೆ ನಡೆಯಲಿದೆ.

ಜ.14ನೇ ಆದಿತ್ಯವಾರ ಭಂಡಾರ ತೆಗೆಯುವುದು, ಧ್ವಜಾರೋಹಣ, ಬೀರತಂಬಿಲ ನಡೆದಿದು. 15ರಂದು ರಾತ್ರಿ ಪೂ. ಗಂಟೆ 6-00ರಿಂದ 48 ಕಾಯಿ ಗಣಪತಿ ಹೋಮ, ಪೂ. ಗಂಟೆ 9-00ರಿಂದ ಆನೆ ಚಪ್ಪರ ಏರಿಸುವುದು, ಬಳಿಕ ಮಕರ ತೋರಣ ಏರಿಸುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 8ರಿಂದ ಪಾಲಕ್ಕಿ ಉತ್ಸವ, ಬೀರತಂಬಿಲ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

16ರಂದು ಪೂ. ಗಂಟೆ 11-00ರಿಂದ ಕಿನ್ನಿಮಾಣಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಂಟೆ 8-00ರಿಂದ ಪಾಲಕ್ಕಿ ಉತ್ಸವ, ಬೀರ ತಂಬಿಲ. 17ರಂದು ಪೂ. ಗಂಟೆ 11ರಿಂದ ಪೂಮಾಣಿ ದೈವದ ನೇಮ, ಪ್ರಸಾದ ವಿತರಣೆ. ಅನ್ನಸಂತರ್ಪಣೆ. ರಾತ್ರಿ ಗಂಟೆ 8ರಿಂದ ಪಾಲಕ್ಕಿ ಉತ್ಸವ, ಬೀರ ತಂಬಿಲ ನಡೆಯಲಿದೆ.

18ನೇ ಗುರುವಾರ ಪೂ. ಗಂಟೆ 7ರಿಂದ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು, ಮಲರಾಯ ದೈವದ ನೇಮ. ಪೂ. ಗಂಟೆ 11ರಿಂದ ವ್ಯಾಘ್ರಚಾಮುಂಡಿ (ರಾಜನ್) ದೈವದ ನೇಮ. ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಸಂಜೆ ಗಂಟೆ 5ರಿಂದ ಕನ್ನಡ್ಕ ತರವಾಡಿನ ದೈವಸ್ಥಾನದಿಂದ ರುದ್ರ ಚಾಮುಂಡಿ ದೈವದ ಭಂಡಾರ ಬರುವುದು. ರಾತ್ರಿ ಗಂಟೆ 7-30ರಿಂದ ಪಡುಮಲೆ-ದೊಡ್ಡಮನೆಗೆ ಅವಭೃತ ಸ್ನಾನಕ್ಕೆ ಹೋಗುವುದು, ಕಟ್ಟೆಪೂಜೆ, ಧ್ವಜಾವರೋಹಣ, ರುದ್ರಾಂಡಿ ದೈವದ ನೇಮ, ನವಕಾಭಿμÉೀಕ, ಮಂತ್ರಾಕ್ಷತೆ, ಬಳಿಕ ಗುಳಿಗ ದೈವದ ನೇಮ ನಡೆಯಲಿದೆ.

19ನೇ ಶುಕ್ರವಾರ ಪೂ. ಗಂಟೆ 10-00ರಿಂದ ಪಡುಮಲೆ ದೇವಸ್ಥಾನದ ಪಿಲಿಮಾಡದ ವಠಾರದಲ್ಲಿ ವ್ಯಾಘ್ರಚಾಮುಂಡಿ ದೈವದ ನೇಮ ನಡೆಯಲಿದೆ.