Sunday, November 24, 2024
ಸುದ್ದಿ

ತಾವರೆಯಂತೆ ಮಂಡೋದರಿಯೂ ತನ್ನ ಶುದ್ಧತೆಯನ್ನ ಕಾಪಾಡಿಕೊಂಡು ಅಂತರ್ಮುಖಿಯಾದವಳು – ಕೇಶವ ಭಟ್ ಕೇಕಣಾಜೆ ವಿವೇಕಾನಂದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶ್ರೀರಾಮೋತ್ಸವ – ‘ಅಹಲ್ಯಾರಾಮ ಸ್ಮರಣೆ’

ಪುತ್ತೂರು :  ಕೊಳಚೆಯಲ್ಲಿ ಅರಳಿದ ತಾವರೆ ಹೇಗೆ ತನ್ನ ಶುದ್ಧತೆಯನ್ನು ಕಾಪಾಡಿಕೊಂಡು ಸಾಲಿಗ್ರಾಮದ ಮುಡಿಯೇರುತ್ತದೆಯೋ ಹಾಗೆಯೇ ಮಂಡೋದರಿಯೂ ಅಂತರ್ಮುಖಿಯಾಗಿ, ಭಾವ-ಸದ್ಬಾವದಿಂದ ರಾಮನಿಗೆ ತನ್ನನ್ನು ತಾನು ಸಮರ್ಪಿಸಿಕೊಂಡು ಅವನನ್ನು ಅರಿತವರಲ್ಲಿ ಅಗ್ರಸ್ಥಾನದಲ್ಲಿದ್ದಾಳೆ ಎಂದು ಯಕ್ಷಗಾನ ಅರ್ಥದಾರಿ ವೇದಮೂರ್ತಿ ಕೇಶವ ಭಟ್ಟ ಕೇಕಣಾಜೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ತುಳು ಸಂಘ, ಕನ್ನಡ ಸಂಘ, ಹಿಂದಿ ಸಂಘ, ಸಂಸ್ಕೃತ ಸಂಘ ಮತ್ತು ಎನ್.ಸಿ.ಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಮೋತ್ಸವದ ಮೂರನೇ ದಿನದ ಅಹಲ್ಯಾರಾಮ ಸ್ಮರಣೆಯಲ್ಲಿ ‘ಮಂಡೋದರಿಯ ಅಂತರಂಗದಲ್ಲಿ ರಾಮ’ ಎಂಬ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದರು.

ಶ್ರೀಮದ್ ವಾಲ್ಮೀಕಿ ರಾಮಾಯಣ ಭಾರತೀಯ ಸಂಸ್ಕೃತಿಯಾದರೆ ಅಯೋಧ್ಯೆ ನಮ್ಮ ದೇಶದ ಸಂಸ್ಕಾರ ಕೇಂದ್ರ. ಟಿವಿಯಲ್ಲಿ, ಸಿನಿಮಾಗಳಲ್ಲಿ ರಾಮಾಯಣವನ್ನು ಹಲವಾರು ರೀತಿಗಳಲ್ಲಿ ತೋರಿಸಿದ್ದರೂ ಕೂಡ ಭಾರತ ನಂಬಿದ್ದು ವಾಲ್ಮೀಕಿ ಬರೆದ ರಾಮಾಯಣವನ್ನು ಮಾತ್ರ. ರಾಮಾಯಣದಲ್ಲಿ ಸೀತೆಯ ಸ್ಥಾನದಂತೆಯೇ ಮಂಡೋದರಿಯದ್ದು ಕೂಡ ಎಂದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಿದೆ. ರಾಕ್ಷಸ ಪರಿವಾರದ ಹಿನ್ನೆಲೆ ಜೊತೆಗೆ ರಾವಣನ ಮಡದಿಯಾಗಿದ್ದರೂ ಮಂಡೋದರಿಗೆ ರಾಮನ ದರ್ಶನವಾಯಿತು. ಹೇಗೆಂದರೆ ಅವಳು ಸಧ್ವಿ ಶಿರೋಮಣಿ, ಮಹಾ ಪತಿವ್ರತೆ. ಅದಕ್ಕೂ ಮಿಗಿಲಾಗಿ ಮಂಡೋದರಿ ರಾಮನ್ನು ಒಳಗಣ್ಣಿನಿಂದ ಅರಿತವಳೂ, ಅನುಸರಿಸಿದವಳೂ ಅಗಿರುವುದರಿಂದ. ಹಾಗಾಗಿಯೇ ಅವಳಲ್ಲಿ ಒಳ್ಳೆಯತನಗಳೇ ತುಂಬಿಕೊಂಡಿದ್ದವು ಎಂದು ಕೇಶವ ಭಟ್ಟ ಕೇಕಣಾಜೆ ಹೇಳಿದರು.

ವೇದಿಕೆಯಲ್ಲಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್‌ನ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಜಗನ್ನಾಥ. ಎ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳೀಕೃಷ್ಣ ಕೆ ಎನ್, ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಪರೀಕ್ಷಾಂಗ ಕುಲಸಚಿವ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಹೆಚ್.ಜಿ ಶ್ರೀಧರ್, ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್, ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಶ್ರಾವ್ಯ ಸ್ವಾಗತಿಸಿ, ವಿದ್ಯಾಸರಸ್ವತಿ ವಂದಿಸಿದರು. ಕಾರ್ಯಕ್ರಮವನ್ನು ದ್ವೀತಿಯ ಎಂ.ಕಾಂ ವಿದ್ಯಾರ್ಥಿನಿ ಪೂಜಾಲಕ್ಷ್ಮಿ ನಿರೂಪಿಸಿದರು.

ದೀಪ ಪ್ರಜ್ವಲನೆ:

ಶ್ರೀ ರಾಮೋತ್ಸವದ ಮೂರನೇ ದಿನದ ಕಾರ್ಯಕ್ರಮವನ್ನು ಕಾಲೇಜು ಪರಿಚರಾಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪುಷ್ಪಾವತಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಕೊನೆಯಲ್ಲಿ ರಾಮ ಭಾವಪೂಜೆಯ ಮೂಲಕ ಕಾರ್ಯಕ್ರಮವು ಸಂಪನ್ನಗೊಂಡಿತು.

ಗೌರವಾರ್ಪಣೆ:

ಈ ಸಂದರ್ಭದಲ್ಲಿ 17 ವರ್ಷಗಳಿಂದ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನಾತಕೋತ್ತರ ಕಛೇರಿ ಸಹಾಯಕ ಸೀತಾರಾಮ ದಂಪತಿ ಹಾಗೂ ಪ್ರಯೋಗಾಲಯ ಸಹಾಯಕ ಶಿವರಾಮ ಇವರಿಗೆ ಸನ್ಮಾನಿಸಲಾಯಿತು.

ಪ್ರವಚನ:

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಮಾತನಾಡಿ, ರಾಮನು ಬಾಹ್ಯಪ್ರಿಯನಲ್ಲ, ಭಾವಪ್ರಿಯ. ರಾಮಾಯಣ ಒಳಿತು ಕೆಡುಕುಗಳ ನಿದರ್ಶನವಿದ್ದಂತೆ. ರಾಮನ ಅನುಗ್ರಹವೊಂದಿದ್ದರೆ ಮೂಗನು ಮಾತನಾಡುತ್ತಾನೆ, ಕುಂಟನು ಬೆಟ್ಟವನ್ನು ಹತ್ತಬಲ್ಲ. ಎಲ್ಲದಕ್ಕೂ ರಾಮ ಮಂತ್ರವೊಂದೇ ಸಾಕು. ರಾಮನ ಜಪವಿದ್ದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂದರು.