Tuesday, January 21, 2025
ಸುದ್ದಿ

ಕನ್ನಡ ಹಾಡು ಹಾಡಿ ಪ್ರಧಾನಿ ಮೋದಿಯ ಮೆಚ್ಚುಗೆಗೆ ಪಾತ್ರರಾದ ಶಿವಶ್ರೀ ಯಾರು – ಕಹಳೆ ನ್ಯೂಸ್

ಶಿವಶ್ರೀ ಹಾಡಿರುವ ಸಾಂಗ್‌ನ ವಿಡಿಯೋ ಲಿಂಕ್‌ನ ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಶೇರ್ ಮಾಡಿಕೊಂಡಿದ್ದಾರೆ. ಶಿವಶ್ರೀ ಪ್ರಯತ್ನವನ್ನು ಅವರು ಮೆಚ್ಚಿದ್ದಾರೆ. ಈ ಟ್ವೀಟ್‌ನ ರೀಟ್ವೀಟ್ ಮಾಡಿಕೊಂಡಿರುವ ಶಿವಶ್ರೀ ಅವರು ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ.


ರಾಜ್‌ಕುಮಾರ್ ಹಾಗೂ ಕಲ್ಪನಾ ನಟನೆಯ ‘ಎರಡು ಕನಸು’ ಸಿನಿಮಾದ ‘ಪೂಜಿಸಲೆಂದೆ ಹೂಗಳ ತಂದೆ..’ ಈಗಲೂ ಅನೇಕರ ಫೇವರಿಟ್ ಹಾಡುಗಳಲ್ಲಿ ಒಂದು. ಈ ಹಾಡನ್ನು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ತಮ್ಮದೇ ಶೈಲಿಯಲ್ಲಿ ಹಾಡಿ ಯೂಟ್ಯೂಬ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ಹಾಡಿನ ಲಿಂಕ್‌ನ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಹಂಚಿಕೊAಡಿದ್ದಾರೆ. ಜೊತೆಗೆ ಈ ಹಾಡಿನ ಬಗ್ಗೆ ಹಾಗೂ ಶಿವಶ್ರೀ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಶ್ರೀ (ಯಾರು ಎನ್ನುವ ಹುಡುಕಾಟ ಆರಂಭ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಶ್ರೀ ಹಾಡಿರುವ ಸಾಂಗ್‌ನ ವಿಡಿಯೋ ಲಿಂಕ್‌ನ ಟ್ವಿಟರ್‌ನಲ್ಲಿ ಮೋದಿ ಶೇರ್ ಮಾಡಿಕೊಂಡಿದ್ದಾರೆ. ಅವರು ಶಿವಶ್ರೀ ಪ್ರಯತ್ನವನ್ನು ಮೆಚ್ಚಿದ್ದಾರೆ. ಈ ಟ್ವೀಟ್‌ನ ರೀಟ್ವೀಟ್ ಮಾಡಿಕೊಂಡಿರುವ ಶಿವಶ್ರೀ ಅವರು ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ. ಶಿವಶ್ರೀ ಅವರು ಅನೇಕ ಹಾಡುಗಳನ್ನು ಈವರೆಗೆ ಹಾಡಿದ್ದಾರೆ.
ಶಿವಶ್ರೀ ಅವರು ಕಲಾವಿದರ ಕುಟುಂಬದಿAದಲೇ ಬಂದವರು. ಹೀಗಾಗಿ, ಅವರಿಗೆ ಸಣ್ಣ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಒಲವು ಇತ್ತು. ಶಾಸ್ತ್ರೀಯ ಸಂಗೀತ, ಭರತನಾಟ್ಯವನ್ನು ಅವರು ಕಲಿತಿದ್ದಾರೆ. ಶಿವಶ್ರೀ ಅವರ ತಾತ ಖ್ಯಾತ ಸಂಗೀತಕಾರರಾಗಿದ್ದರು. ಶಿವಶ್ರೀ ಅವರ ತಂದೆ ಖ್ಯಾತ ಮೃದಂಗ ವಾದಕ ವಿದ್ವಾನ್ ಸೀರ್ಕಾಜಿ ಜೆ. ಸ್ಕಂದಪ್ರಸಾದ್. ಶಿವಶ್ರೀ ಅವರು ಎ.ಎಸ್. ಮುರಳಿ ಮತ್ತು ಆಚಾರ್ಯ ಚೂಡಾಮಣಿ ಅವರಲ್ಲಿ ಸಂಗೀತ ಕಲಿತಿದ್ದಾರೆ. ರೋಜಾ ಕಣ್ಣನ್ ಅವರಿಂದ ಭರತನಾಟ್ಯ ತರಬೇತಿ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಶ್ರೀ ಅವರ ಸಹಜ ಪ್ರತಿಭೆ, ಕುಟುಂಬದ ಪ್ರೋತ್ಸಾಹ, ಕಠಿಣ ಪರಿಶ್ರಮ ಮತ್ತು ಶಾಸ್ತ್ರೀಯ ಕಲೆಗಳಲ್ಲಿ ತೋರಿದ ಉತ್ಸಾಹದಿಂದ ವೃತ್ತಿಪರ ಕಲಾವಿದೆಯಾಗಿ ಬೆಳೆಯಲು ಸಹಕಾರಿ ಆಯಿತು. ಶಿವಶ್ರೀ ಅವರು ಬಯೋ-ಇಂಜಿನಿಯರಿAಗ್ ಪದವೀಧರೆ ಆಗಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಎ ಭರತನಾಟ್ಯ ಮತ್ತು ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಡಿಪ್ಲೊಮಾ ಪಡೆದಿದ್ದಾರೆ.

ಕನ್ನಡ ಹಾಡಿಗೆ ತಲೆದೂಗಿದ ಪ್ರಧಾನಿ ಮೋದಿ: ಪೂಜಿಸಲೆಂದೇ ಹೂಗಳ ತಂದೆ ಹಾಡಿಗೆ ಮೆಚ್ಚುಗೆ

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ‘ಹೇಳೆ ನೀನು..’ (ಕನ್ನಡ ವರ್ಷನ್) ಹಾಡನ್ನು ಶಿವಶ್ರೀ ಹಾಡಿದ್ದಾರೆ. ಇನ್ನೂ ಹಲವು ಹಾಡಿಗೆ ಅವರು ಧ್ವನಿ ಆಗಿದ್ದಾರೆ. ಈಗ ಮೋದಿ ಟ್ವೀಟ್‌ನಿಂದ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರನ್ನು 80 ಸಾವಿರ ಜನರು ಫಾಲೋ ಮಾಡುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಅವರಿಗೆ ಒಂದೂವರೆ ಲಕ್ಷ ಚಂದಾದಾರರು ಇದ್ದಾರೆ.