Monday, January 20, 2025
ಸುದ್ದಿ

ಬ್ರಹ್ಮಾವರ ಮಹಿಳಾ ಸಾರಥ್ಯ ವಹಿಸಿದ ಅಕ್ಷಯ ಶೆಟ್ಟಿ – ಕಹಳೆ ನ್ಯೂಸ್

ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಕುಮಾರ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದಿಂದ ಸಮಾಲೋಚನಾ ಸಭೆಯು ಇಂದು ಕಾರ್ತಿಕ್ ಎಸ್ಟೇಟ್‌ನ ಮಿನಿ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾಕರ ರಾಜ್ ಪೂಜಾರಿ ವಹಿಸಿಕೊಂಡು 20 ಕ್ಕೂ ಹೆಚ್ಚು ನೂತನ ಕಾರ್ಯಕರ್ತರನ್ನು ಸೇರ್ಪಡೆಗೊಳಿಸಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಹ್ಮಾವರ ಮಹಿಳಾ ಬಳಗದ ಸಾರಥ್ಯ ವಹಿಸಿದ ಅಕ್ಷಯ ಶೆಟ್ಟಿ ಅವರನ್ನು ತಾಲ್ಲೂಕು ಉಸ್ತುವಾರಿಯನ್ನಾಗಿ ಘೋಷಿಸಿ ನೆರೆದಿದ್ದ ಸರ್ವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾ ಸಂಚಾಲಕರಾದ ಅ. ರಾ. ಪ್ರಭಾಕರ್ ರಾಜ್ ಪೂಜಾರಿ ಅವರು ಮಾತನಾಡುತ್ತಾ,ಮುಂದಿನ ದಿನಗಳಲ್ಲಿ ಬ್ರಹ್ಮಾವರ ತಾಲ್ಲೂಕಿನಾದ್ಯಂತ ಸಂಘಟನೆ ಕಟ್ಟುವುದರ ಮುಕೆನಾ ನಿಮ್ಮ ನೇತೃತ್ವದ ತಂಡವನ್ನು ಸಂಘದ ಶಕ್ತಿಯನ್ನಾಗಿಸಬೇಕು, ಮತ್ತು ಆ ಭಾಗದ ಯಾವುದೇ ಒಬ್ಬ ವ್ಯಕ್ತಿಗೆ ಅನ್ಯಾಯವಾದಾಗ ಕೂಡಲೇ ಸ್ಪಂದಿಸುವAತಹ ಸಂಘಟನೆ ನಮ್ಮದಾಗಬೇಕು ಎಂಬ ನಿಟ್ಟಿನಲ್ಲಿ ನಿಮ್ಮ ಕೆಲಸ ಮುಂದುವರಿಸಿ, ಜಿಲ್ಲೆಯಿಂದ ನಿಮಗೆ ಬೇಕಾದ ಸಲಹೆ, ಸಹಕಾರ ಬೆಂಬಲವನ್ನು ನೀಡಲು ಸದಾ ನಿಮ್ಮೊಂದಿಗೆ ಇದ್ದೇವೆ ಎನ್ನುವ ಭರವಸೆಯ ಮಾತುಗಳೊಂದಿಗೆ ನಿನ್ನೆ ನಡೆದ ಸಮಾಲೋಚನಾ ಸಭೆಯಲ್ಲಿ ಅಧಿಕಾರವನ್ನು ವಹಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಜಿಲ್ಲಾ ಪ್ರಮುಖರು, ಮತ್ತು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಕರವೇ ಮುಖಂಡ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.