Thursday, November 21, 2024
ಅಂಕಣಕೃಷಿದಕ್ಷಿಣ ಕನ್ನಡಪುತ್ತೂರು

ಪ್ರಕೃತಿ :ಜೀರಿಗೆ ಮೆಣಸು, ಗಾಂಧಾರಿ ಮೆಣಸು

ಜೀರಿಗೆ ಮೆಣಸು ಹೆಚ್ಚು ಹಾರೈಕೆ ಇಲ್ಲದೆ ಅಧಿಕ ಖಾರ ಹೊಂದಿರುವ ಚಿಕ್ಕ ಚಿಕ್ಕ ಮೆಣಸು, ಇದಕ್ಕೆ ಇದೀಗ ಬಾರಿ ಬೇಡಿಕೆ ಬಂದಿದೆ ಜೀರಿಗೆ ಮೆಣಸು ಸೂಜಿ ಮೆಣಸು, ಕಾಗೆ ಗಾಂಧಾರಿ, ಕಾಗೆ ಮೆಣಸು ,ಪರ್ ಡೇ ಚಿಲ್ಲಿ ಎಂದೆಲ್ಲ ಕರೆಯುತ್ತಾರೆ.

ಅಡಿಕೆ ತೋಟದಲ್ಲಿ ಮನೆ ಹತ್ತಿರ ಇದನ್ನು ಕಾಣಬಹುದು ಕಳೆನಾಶಕ ಯಂತ್ರಗಳ ಮುಖಾಂತರ ಕಳೆ ತೆಗೆಯುವಾಗ ಇದೀಗ ನಾಶವಾಗುತ್ತಿದೆ ಮನೆ ಹಿತ್ತಲಲ್ಲಿ ಬೆಳೆಯುವ ಈ ಮೆಣಸು ಗರಿಷ್ಠ ಔಷದಿಯ ಗುಣ ಹೊಂದಿದೆ ಹಣ್ಣನ್ನು ಕೊಯ್ದು ಒಣಗಿಸಿ ಮಾರಾಟ ಮಾಡಬಹುದು. ಕೇಜಿಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ಧಾರಣೆ ಇದೆ. ಗಾಂಧಾರಿ ಮೆಣಸಿನ ಜ್ಯೂಸು ಆರೋಗ್ಯಕ್ಕೂ ಉತ್ತಮ ನಮ್ಮಲ್ಲಿ ಇದನ್ನ ತಯಾರಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಸಭೆ ಸಮಾರಂಭಗಳಲ್ಲೂ ಇದರ ಬಳಕೆಯನ್ನು ಕಾಣಬಹುದು ಹಾಗೆ ಲಿಂಬೆ ಜೊತೆ ಉಪ್ಪಿನಕಾಯಿಯಲ್ಲೂ ಬಳಕೆಯಾಗುತ್ತದೆ. ಕಾಗೆ ಹಣ್ಣುಗಳನ್ನು ತಿಂದು ಬೀಜ ಪ್ರಸಾರವಾಗಿ ಮಾಡುತ್ತವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲಲ್ಲಿ ಗಿಡಗಳು ತನ್ನಿಂದ ತಾನೇ ಹುಟ್ಟಿ ಬೆಳೆಯುತ್ತವೆ ಯಾರು ಇದನ್ನು ಕೃಷಿ ಮಾಡುವುದಿಲ್ಲ ಮಾಡಬೇಕಾಗಿಲ್ಲ ತನ್ನಿಂದ ತಾನೇ ಬೆಳೆಯುತ್ತದೆ .
ಪೂಕವಕ ಕೃಷಿಯಂತೆ ಅಲ್ಲದೆ ಅದರ ಬಗ್ಗೆ ತಾತ್ಸರ ಮನೋಭಾವ ಬೆಳೆದು ಪೇಟೆ ಪಟ್ಟಣದ ಮೆಣಸು ಅಗ್ಗ ಎಂಬ ಭಾವನೆಯಿಂದ ಇಂದು ನಶಿಸುತ್ತಾ ಇದೆ.
ಪೇಟೆ ಪಟ್ಟಣದಲ್ಲಿ ಸಿಗುವ ಮೆಣಸು ವಿಷಕಾರಿಯಾಗಿ ಇದೀಗ ಬರುತ್ತಿದ್ದೆ ನಾವು ಇಲ್ಲದ ಕಾಯಿಲೆಗೆ ಒಳಗಾಗುತ್ತಿದ್ದೇವೆ ಎಂಬ ಅರಿವು ಇದೀಗ ಬಂದಿದೆ ನಮ್ಮ ಹಿಂದಿನವರು ಅನಾದಿಯಿಂದಲೇ ಇದನ್ನೇ ಬಳಕೆ ಮಾಡುತ್ತಿದ್ದು .

ಬಾಯಿಗೆ ಖಾರವಾದರೂ, ಉದರಕ್ಕೆ ಇದು ಸಿಹಿಯೇ ಆಗಿದೆ ನಮ್ಮ ಹೊಟ್ಟೆಯನ್ನು ಪಾನಿಪೂರಿ ಪಿಜ್ಜಾ,ಬರ್ಗರ್ ಎಂದೆಲ್ಲ ತಿಂದು ಹೊಟ್ಟೆಯನ್ನು ಕಸದ ತೊಟ್ಟಿಗಿಂತಲು ಕೀಳಾಗಿಸಿದ್ದೇವೆ. ಆದ್ದರಿಂದಲೇ ಇಂದು ಕಾಯಿಲೆಗಳ ಫ್ಯಾಕ್ಟರಿ ಆಗಿದೆ ಎಚ್ಚೆತ್ತುಕೊಂಡರೆ ಮಾತ್ರ ಆರೋಗ್ಯವೇ ಭಾಗ್ಯ ಎನ್ನಬಹುದು ಬಾಯಿಗೆ ರುಚಿಸುವುದೆಲ್ಲ ಆರೋಗ್ಯಕ್ಕೆ ಉತ್ತಮವಲ್ಲ ಹಾಗಲಕಾಯಿ ಬಾಯಿಗೆ ಕಹಿಯಾದರೂ ಉದರಕ್ಕೆ ಸಿಹಿ ಎಂಬಂತೆ ಬಿಳಿ ಹರಳು ಸಕ್ಕರೆ ಅಷ್ಟೇ ಹಾಳು ಅರಿತು ಬಾಳಿದರೆ ಸುಖ ಖಾರ ಎಂದರು ದೇಹಕ್ಕೆ ಹಿತ ತಂಪು ಮೆಣಸು…..!

ಚಿತ್ರ ಬರಹ :ಕುಮಾರ್ ಪೆರ್ನಾಜೆ ಪುತ್ತೂರು
ಪೆರ್ನಾಜೆ ಪೋಸ್ಟ್ ಪೆರ್ನಾಜೆ ಮನೆ ಕಾವು ವ.ಯ ಪುತ್ತೂರು ತಾಲೂಕು ದಕ್ಷಿಣ ಕನ್ನಡ 574223
Mob:9480240643