Sunday, January 19, 2025
ಸುದ್ದಿ

ವಿವೇಕಾನಂದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶ್ರೀರಾಮೋತ್ಸವ – ‘ವನರಾಮ ಸ್ಮರಣೆ’ ದೇಶದ ಸೇನೆಯ ಬಲ ಎಷ್ಟೆಂದು ಅಂದೇ ನಾ ಅರಿತೆ – ನೀರ್ಕಜೆ ಜಯಶ್ಯಾಮ

ಪುತ್ತೂರು : ದಶಕಗಳ ಹೋರಾಟದ ಫಲವನ್ನು ನಾವೆಲ್ಲಾ ಇನ್ನೇನು ಕೆಲವೇ ದಿನಗಳಲ್ಲಿ ಕಣ್ತುಂಬಿಕೊಳ್ಳಲಿದ್ದೇವೆ. ಈ ಸಂಭ್ರಮಕ್ಕೆ ಅದೇಷ್ಟೋ ಕರಸೇವಕರ ಬಲಿದಾನವಾಗಿದೆ, ಅದೆಷ್ಟೋ ತಾಯಂದಿರು ತಮ್ಮ ಮಕ್ಕಳನ್ನು ರಾಮ ಸೇವೆಗಾಗಿ ತ್ಯಾಗ ಮಾಡಿದ್ದಾರೆ. ಅಷ್ಟೂ ಕರಸೇವಕರಲ್ಲಿ ನಾನು ಒಬ್ಬ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ಕರಸೇವೆಯ ರೋಚಕ ಭಾಗವೆಂದರೆ ಅಡ್ಡಗೋಡೆಯನ್ನು ಸರಿಸಿ ರಾಮಜನ್ಮ ಭೂಮಿ ಪುನರ್ ನಿರ್ಮಾಣವಾಗಬೇಕೆನ್ನುವ ರಾಷ್ಟ್ರ ಕಾರ್ಯದ ಇಚ್ಛೆ ಪ್ರತಿಯೊಬ್ಬರಲ್ಲಿ ಮೂಡಿತ್ತು. ಅಂದು ನನಗೆ ಅರಿವಾಗಿದ್ದು ಒಂದೇ ನಮ್ಮ ದೇಶದ ಸೇನೆ ಅದೆಷ್ಟು ಬಲಿಷ್ಠವಾದುದು ಎಂದು ಶ್ರೀದೇವಿ ಪ್ರೌಢಶಾಲೆ ದೇವಿನಗರ ಇಲ್ಲಿನ ಅಧ್ಯಕ್ಷ ನೀರ್ಕಜೆ ಜಯಶ್ಯಾಮ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಯಶಸ್, ಭವಿಷ್ ಘಟಕ ಮತ್ತು ವಾಣಿಜ್ಯ ಸಂಘದ ಸಹಕಾರದೊಂದಿಗೆ ನಡೆದ ವನರಾಮ ಸ್ಮರಣೆಯಲ್ಲಿ ರಾಮ ಜನ್ಮಭೂಮಿಗೆ ಕರಸೇವೆಯ ಕೊಡುಗೆ ಎಂಬ ವಿಚಾರದ ಕುರಿತು ಪ್ರಸ್ತಾಪಿಸಿ ಮಾತನಾಡಿದರು.
ಮರ್ಯಾದ ಪುರುಷೋತ್ತಮ ಶ್ರೀರಾಮ ಪ್ರಭುವಿನ ದೇವಸ್ಥಾನ ಆಗಬೇಕು ಎಂದು ಹಲವಾರು ರಾಮಭಕ್ತರು ಆ ದಿನಗಳಲ್ಲಿ ಜೀವತೆತ್ತಿದ್ದಾರೆ. ಕರಸೇವೆಯ ಸಮಯದಲ್ಲಿ ಬಿದ್ದಂತ ಕಂಬಗಳಲ್ಲಿ ವಿಷ್ಣುವಿನ ಅವತಾರ, ವರಾಹ ಅವತಾರ ಇತ್ಯಾದಿ ಚಿಹ್ನೆಗಳಿವೆ ಎಂದು ಅಯೋಧ್ಯೆಯ ರಾಮ ಜನ್ಮ ಭೂಮಿಯ ವಾಸ್ತವಿಕ ಚಿತ್ರಣವನ್ನು ಪರಿಚಯಿಸಿದರು. ಅಂತೆಯೇ ಮೊಬೈಲ್ ಇಲ್ಲದ ಕಾಲದಲ್ಲಿ ವಿಶ್ವಹಿಂದೂ ಪರಿಷತ್ ತೆಗೆದುಕೊಂಡ ಹಲವು ಸವಾಲುಗಳು ಶ್ಲಾಘನೀಯ. 1990ರಿಂದ 1992ರ ಅವಧಿಯಲ್ಲಿ ಹೊಸ ರಾಮಜನ್ಮ ಭೂಮಿ ನಿರ್ಮಾಣದ ಆಂದೋಲನವನ್ನು ಹಿಂದೂ ಪರಿಷತ್ ಕೈಗೆತ್ತಿಕೊಂಡಿತ್ತು. ರಾಮ ಭಕ್ತರನ್ನು ಬಡಿದೆಬ್ಬಿಸುವ ಕಾರ್ಯವನ್ನು ಹಿಂದೂ ಪರಿಷತ್ ನಿರಂತರವಾಗಿ ಮಾಡಿತ್ತು. ಅದರ ಫಲವೇ ಶ್ರೀರಾಮ ಮಂದಿರದ ಪ್ರತಿಷ್ಠಾಪನೆ ಎಂದು ನೀರ್ಕಜೆ ಜಯಶ್ಯಾಮ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಸದಸ್ಯ ಅನಂತಕೃಷ್ಣ ನಾಯಕ್ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ. ಎನ್, ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯ್ಕ, ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀ ರಾಮೋತ್ಸವ ಐದನೇ ದಿನದ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಪುಷ್ಪಾ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಕೊನೆಯಲ್ಲಿ ರಾಮ ಭಾವಪೂಜೆಯ ಮೂಲಕ ಕಾರ್ಯಕ್ರಮವು ಸಂಪನ್ನಗೊAಡಿತು. ಇಂದಿನ ಕಾರ್ಯಕ್ರಮದಲ್ಲಿ ರಾಸಾಯನ ಶಾಸ್ತ್ರ ವಿಭಾಗದ ಲ್ಯಾಬ್ ಸಹಾಯಕ ನಾರಾಯಣ ಕೆ ಹಾಗೂ ಸಸ್ಯ ಶಾಸ್ತ್ರ ವಿಭಾಗದ ಲ್ಯಾಬ್ ಸಹಾಯಕ ದಿನೇಶ್ ಪಿ ಇವರಿಗೆ ಗೌರವ ಸಮರ್ಪಿಸಲಾಯಿತು.