Tuesday, January 21, 2025
ಸುದ್ದಿ

ಬೆಳ್ತಂಗಡಿ : ಅಕ್ರಮ ದನ ಸಾಗಾಟ ಪ್ರಕರಣ : 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..! – ಕಹಳೆ ನ್ಯೂಸ್

ಬೆಳ್ತಂಗಡಿ : ಅಕ್ರಮ ದನ ಸಾಗಾಟ ಪ್ರಕರಣದ ಆರೋಪಿ ಜಾಮೀನು ಪಡೆದುಕೊಂಡ ಬಳಿಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಹೈಯರ್ ನಗರ ನಿವಾಸಿ ವಾಜೀದ್ ಪಾಷಾ(54) ಬಂಧಿತ ಆರೋಪಿ.ವಾಜೀದ್ ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೇ ಸುಮಾರು 8 ವರ್ಷದಿಂದ ತಲೆಮರೆಸಿಕೊಂಡು ಬೇರೆ ಕಡೆ ವ್ಯಾಪಾರ ಮಾಡಿಕೊಂಡಿದ್ದ.
ವಾಜೀದ್ ಪಾಷಾನನ್ನು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರು ನಾಗೇಶ್ ಕದ್ರಿ ಹಾಗೂ ಧಮ9ಸ್ಥಳ ಠಾಣಾ ಪಿ.ಎಸ್.ಐ ಅನೀಲ್ ಕುಮಾರ್.ಡಿ.(ಕಾ.ಸು) & ಪಿ.ಎಸ್.ಐ ಸಮರ್ಥ ಆರ್ ಗಾಣಿಗೆರ (ತನಿಖೆ) ರವರ ಮಾಗ9ದರ್ಶನದಂತೆ ಧರ್ಮಸ್ಥಳ ಠಾಣಾ ಹೆಚ್ ಸಿ ರಾಜೇಶ್ ಎನ್, ಪಿ.ಸಿ ಗೋವಿಂದ ರಾಜ್, ಪಿ.ಸಿ ಮಲ್ಲಿಕಾರ್ಜುನ್ ರವರು ಹಾಸನ ಹೊಳೆನರಸೀಪುರದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ವಾಜೀದ್ ಪಾಷಾನಿಗೆ ದಂಡ ವಿಧಿಸಿದೆ.