ಪಂಜ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಹಿಂದುಯೇತರಿಗೆ ಅವಕಾಶ ನೀಡದಿರುವಂತೆ ಹಿಂಜಾವೇ ಮನವಿ – ಕಹಳೆ ನ್ಯೂಸ್
ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಸ್ಥಳಗಳಲ್ಲಿ ವ್ಯಾಪಾರ ನಡೆಸಲು ಅನ್ಯಮತೀಯರಿಗೆ ಅವಕಾಶ ನೀಡಬಾರದು. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮದ ನಿಯಮ 31(12)ರಂತೆ ಹಿಂದುಗಳಲ್ಲದವರಿಗೆ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಥವಾ ಸ್ಥಳಗಳನ್ನು ಏಲಂನಲ್ಲಿ ಪಡೆಯಲು ಅವಕಾಶ ಕಲ್ಪಿಸಿಕೊಡಬಾರದು.
ನಿಯಮವನ್ನು ಉಲ್ಲಂಘಿಸಿ ಹಿಂದುಗಳಲ್ಲದವರಿಗೆ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿಲು ಅನುಮತಿ ನೀಡಿದಲ್ಲಿ ಸಂಘಟನೆಯು ತೀವ್ರವಾಗಿ ಹೋರಾಟ ನಡೆಸುತ್ತೇವೆ ಎಂದು ದೇವಸ್ಥಾನದ ಆಡಳಿತಾಧಿಕಾರಿಗಳಿಗೆ ಹಿಂದೂ ಜಾಗರಣ ವೇದಿಕೆ ನೀಡಿದ ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಮೋಹನ್ ದಾಸ್ ದೋಲ್ಪಾಡಿ, ಜಿಲ್ಲಾ ಸಹ ಸಂಯೋಜಕ್ ಅನುಪ್ ಕುಮಾರ್ ಆಳ್ವ ಎಣ್ಮೂರು, ಜಿಲ್ಲಾ ಸಂಪರ್ಕ ಪ್ರಮುಖ್ ಸತೀಶ್ ಮೂಕಮಲೆ, ತಾಲೂಕು ಸಂಯೋಜಕ ಸಚಿನ್ ವಳಲಂಬೆ, ತಾಲೂಕು ಯುವವಹಿನಿ ಪ್ರಮುಖ ಹರ್ಷಿತ್ ಕಡ್ತಲ್ ಕಜೆ, ತಾಲೂಕು ಸಂಪರ್ಕ ಪ್ರಮುಖ್ ದಯಾನಂದ ಮೇಲ್ಮನೆ, ಹಿಂಜಾವೇ ತಾಲೂಕು ಪ್ರಮುಕರು ಕಿರಣ್ ನೆಕ್ಕಿಲ , ಹರಿಪ್ರಸಾದ್ ಕೊಲ್ಲಮೊಗ್ರ ಉಪಸ್ಥಿತರಿದ್ದರು.