Monday, January 20, 2025
ಸುದ್ದಿ

ರಾಮಕ್ಷತ್ರಿಯರಿಂದ ಶ್ರೀ ರಾಮದೇವರ ಚಿತ್ರಪಟ ಅಭಿಯಾನ – ಕಹಳೆ ನ್ಯೂಸ್

ಮೂಡುಬಿದಿರೆ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೇವರ ಪ್ರಾಣ ಪ್ರತಿಷ್ಠೆಯ ಸಂದರ್ಭದ ಸವಿನೆನಪಿಗಾಗಿ  ಮೂಡುಬಿದಿರೆ ರಾಮಕ್ಷತ್ರಿಯ ಸೇವಾ ಸಂಘದ ನೇತೃತ್ವದಲ್ಲಿ ಶ್ರೀರಾಮ ಚಿತ್ರಪಟ ಅಭಿಯಾನ ನಡೆಯುತ್ತಿದೆ, ಮೂಡುಬಿದಿರೆ ವಲಯದ ರಾಮ ಕ್ಷತ್ರಿಯ ಸಮಾಜ ಬಾಂಧವರ ಮನೆಗೆ ಶ್ರೀ ರಾಮ ದೇವರ ಚಿತ್ರಪಟ ವಿತರಿಸಲಾಗುತ್ತಿದೆ, ಸಾಂಪ್ರದಾಯಕವಾಗಿ ಅಭಿಯಾನವನ್ನು ರಾಮಕ್ಷತ್ರಿಯರು ಮನೆಗೆ ಬಂದ ದೇವರ ಚಿತ್ರಪಟಕ್ಕೆ ಆರತಿ ಬೆಳಗಿ ಶ್ರೀ ರಾಮನನ್ನು ಸ್ವಾಗತಿಸುತಿದ್ದಾರೆ, ಈಗಾಗಲೇ ಮೂಡುಬಿದಿರೆ ವಲಯದಲ್ಲಿ ಅಭಿಯಾನ ಆರಂಭವಾಗಿದ್ದು ವಲಯದ 110 ಮನೆಗಳಿಗೆ ಜನವರಿ 21 ತಾರೀಕು ಒಳಗೆ ಚಿತ್ರಪಟ ವಿತರಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಮ ಕ್ಷತ್ರಿಯ ಸೇವಾ ಸಂಘ, ರಾಮಕ್ಷತ್ರಿಯ ಮಹಿಳಾ ವ್ರಂದ, ರಾಮಕ್ಷತ್ರಿಯ ಯುವವೃಂದ, ರಾಮ ಕ್ಷತ್ರಿಯ ಭಜನಾ ಮಂಡಳಿಯ ಮೂಡುಬಿದಿರೆ ಅಧ್ಯಕ್ಷರು ,ಪದಾಧಿಕಾರಿಗಳು ಹಾಗೂ ಸಮುದಾಯದ ಪ್ರಮುಖರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.