Recent Posts

Sunday, January 19, 2025
ಸುದ್ದಿ

ಯಾವ ವ್ಯಕ್ತಿಯ ವಿರುದ್ದ ಉಗ್ರ ಹೋರಾಟ ಮಾಡಿದ್ದರೋ, ಅವರಿಗೆ ಜೆಡಿಎಸ್ ನಿಂದ ಟಿಕೆಟ್ – ಕಹಳೆ ನ್ಯೂಸ್

ಬೆಂಗಳೂರು: ಎರಡು ದಶಕದ ಹಿಂದೆ ಯಾವ ವ್ಯಕ್ತಿಯ ವಿರುದ್ದ ಉಗ್ರ ಹೋರಾಟ ಮಾಡಿದ್ದರೋ ಆ ವ್ಯಕ್ತಿಗೆ ಇಂದು ತಮ್ಮದೇ ಪಕ್ಷದಿಂದ ಜೆಡಿಎಸ್ ವರಿಷ್ಠ ದೇವೇಗೌಡ ಟಿಕೆಟ್ ನೀಡಿದ್ದಾರೆ.

ಮಂಡ್ಯ ಲೋಕಸಭೆ ಉಪಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವ ಎಲ್.ಆರ್.ಶಿವರಾಮೇಗೌಡ ಅವರ ವಿರುದ್ಧ ದೇವೇಗೌಡರು 26  ವರ್ಷಗಳ ಹಿಂದೆ ಉಗ್ರ ಪ್ರತಿಭಟನೆ ಮಾಡಿದ್ದರೂ, ಅವರನ್ನು ಬಂಧಿಸಿಯೇ ತೀರುವಂತೆ ಒತ್ತಾಯ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇಂದು ಅವರಿಗೆ ತಾವೇ ಟಿಕೆಟ್ ನೀಡಿ ಗೆಲ್ಲಿಸುವ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಇನ್ನೂ ಅವರ ಪರವಾಗಿ ಪ್ರಚಾರವನ್ನೂ ಮಾಡುವ ಸಂಭವ ಸಹ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು