Sunday, January 19, 2025
ಉಡುಪಿಕುಂದಾಪುರದಕ್ಷಿಣ ಕನ್ನಡಪುತ್ತೂರುಬಂಟ್ವಾಳಬೆಳ್ತಂಗಡಿಮೂಡಬಿದಿರೆರಾಜಕೀಯರಾಜ್ಯಸುದ್ದಿ

ಕರಾವಳಿಯ ಕಂಬಳಗಳಿಗೆ ಅನುದಾನ ನೀಡುವಂತೆ ಸಚಿವರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮನವಿ – ಕಹಳೆ ನ್ಯೂಸ್

ಪುತ್ತೂರು: ತುಳುನಾಡಿನ ಜನಪದ ಕ್ರೀಡೆಯಾಗಿರುವ ಕಂಬಳವು ಉಡುಪಿ ಮತ್ತು ದ ಕ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರತೀ ವರ್ಷವೂ ನಡೆಯುತ್ತಿದ್ದು, ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಕಂಬಳಗಳಿಗೂ ತಲಾ 5 ಲಕ್ಷ ಅನುದಾನ ನೀಡುವಂತೆ ಪುತ್ತೂರು ಶಾಸಕರಾದ ಅಶೋಕ್ ರ್ಯಯವರು ಪ್ರವಾಸೋದ್ಯಮ , ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಎಚ್ ಕೆ ಪಾಟೀಲ್‍ಗೆ ಮನವಿ ಸಲ್ಲಿಸಿದ್ದಾರೆ.

ಸಚಿವರನ್ನು ಭೇಟಿಯಾದ ಶಾಸಕರು ದ ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪುರಾತನ ಕಾಲದಿಂದಲೂ ಕಂಬಳ ಕ್ರೀಡೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಂಬಳ ತುಳುನಾಡಿನ ಜನಪದ ಕ್ರೀಡೆಯಾಗಿದ್ದು ಅದನ್ನು ಉಳಿಸಿಕೊಂಡು ಹೋಗುವಲ್ಲಿ ತುಳುನಾಡಿನ ಕಂಬಳ ಪ್ರಿಯರು ಯಶಸ್ವಿಯಾಗಿದ್ದಾರೆ. ಕಂಬಳ ಕ್ರೀಡೆಯನ್ನು ನಡೆಸಬೇಕಾದರೆ ಲಕ್ಷಾಂತರ ರೂ ಖರ್ಚುಗಳಿರುತ್ತದೆ. ಕಂಬಳಕ್ಕೆ ಸರಕಾರ ಕನಿಷ್ಠ 5 ಲಕ್ಷ ರೂ ಅನುದಾನವನ್ನು ನೀಡುವ ಮೂಲಕ ಪುರಾತನ ಜನಪದ ಕ್ರೀಡೆಯನ್ನು ಉಳಿಸುವಲ್ಲಿ ಸರಕಾರ ಸಹಕಾರವನ್ನು ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ಸರಕಾರದಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬೆಂಗಳೂರು ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ಮುರಳೀಧರ್ ರೈ ಮಠಂತಬೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು