ಅಯೋಧ್ಯಾ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ನಿಮಿತ್ತ ಪುತ್ತೂರು ವಿಶ್ವಹಿಂದೂ ಪರಿಷದ್ ಬಜರಂಗದಳ ವತಿಯಿಂದ ಆಟೋರಿಕ್ಷಾ ಚಾಲಕ ಮಾಲಕರಿಗೆ ಭಗವಾಧ್ವಜ ವಿತರಣೆ – ಕಹಳೆ ನ್ಯೂಸ್
ಪುತ್ತೂರು : ಜ.22ರಂದು ಅಯೋಧ್ಯಾ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ಪೂರ್ವಭಾವಿಯಾಗಿ ವಿಶ್ವಹಿಂದೂ ಪರಿಷದ್ ಬಜರಂಗದಳ ಪುತ್ತೂರು ಇದರ ವತಿಯಿಂದ ನಿನ್ನೆ ದರ್ಬೆ ಸರ್ಕಲ್ ನಲ್ಲಿ ಆಟೋ ರಿಕ್ಷಾ ಚಾಲಕ ಮಾಲಕರಿಗೆ ಭಗವಾಧ್ವಜ ವಿತರಿಸಲಾಯಿತು.
ನೂರಕ್ಕೂ ಅಧಿಕ ಆಟೋ ಚಾಲಕ ಮಾಲಕರು ಆಗಮಿಸಿದ್ದು, ಪುತ್ತೂರು ದರ್ಬೆ ವೃತ್ತದಿಂದ ಬೊಳುವಾರು ತನಕ ವರ್ತಕ ಮಿತ್ರರಲ್ಲಿ ಸೋಮವಾರ ನಡೆಯುವ ಅಯೊಧ್ಯಾ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ದಿನ ತಮ್ಮ ಅಂಗಡಿ ಮಳಿಗೆಗಳಲ್ಲಿ ಭಗವಾಧ್ವಜ ಹಾರಿಸಿ, ಶ್ರೀ ರಾಮನ ಭಾವ ಚಿತ್ರ ಇಟ್ಟು ಪುಷ್ಪಾರ್ಚನೆ ಮಾಡಬೇಕೆಂದು ವಿನಂತಿ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷದ್ ಜಿಲ್ಲಾ ಅಧ್ಯಕ್ಷ ಕೃಷ್ಣಪ್ರಸನ್ನ, ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ್ ತೆಂಕಿಲ, ಬಜರಂಗದಳ ನಗರ ಸಂಯೋಜಕ್ ಜಯಂತ್ ಕುಂಜೂರು ಪಂಜ, ವಿಶ್ವಹಿಂದೂ ಪರಿಷದ್ ನಗರ ಕಾರ್ಯದರ್ಶಿ ಜಿತೇಶ್ ಬಲ್ನಾಡು,ವಿ ಎಚ್ ಪಿ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಕೇಶವ ಪ್ರಸಾದ್, ನಗರ ಭಜರಂಗದಳ ಸಹ ಸಂಯೋಜಕ್ ಪ್ರವೀಣ್ ಕಲ್ಲೇಗ ಹಾಗೂ ಪರಿವಾರ ಸಂಘಟನೆಯವರು ಉಪಸ್ಥಿತರಿದ್ದರು.