Saturday, November 23, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ಉದ್ಯೋಗಸ್ಥರ ಚುಣಾವಣೆ ವಿಜೇತರಿಗೆ ಅಭಿನಂದನಾ ಸಮಾರಂಭ – ಕಹಳೆ ನ್ಯೂಸ್

ಬಂಟ್ವಾಳ : ಚುಣಾವಣೆಯಲ್ಲಿ ಸೋತವರು ಮತ್ತು ಗೆದ್ದವರು ಸಹಕಾರಿ ಸಂಘದ ಅಭಿವೃದ್ಧಿ ಕಾರ್ಯಗಳಲ್ಲಿ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಸಂಘವು ಅಭಿವೃದ್ಧಿಯಾಗುತ್ತದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್. ಹೇಳಿದರು.

ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ ವಿಜೇತ ನಿರ್ದೇಶಕರಿಗೆ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಹಕಾರಿ ಸಂಘದಲ್ಲಿ ಸದಸ್ಯರು ಕ್ರಿಯಾಶೀಲರಾಗಿದ್ದಾಗ ಅಭಿವೃದ್ಧಿ ಹೊಂದಲು ಸಾಧ್ಯ. ನಿರ್ದೇಶಕರು ತಮ್ಮ ಜವಾಬ್ದಾರಿಯನ್ನು ಅರಿತು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆಯನ್ನು ಮುನ್ನಡೆಸಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಬಿ.ರಾಮಚಂದ್ರ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಡಾ. ಸುಂದರ ಮೊಯಿಲಿ , ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಉಪಸ್ಥಿತರಿದ್ದು ಶುಭ ಹಾರೈಸಿದರು. ನಿರ್ದೇಶಕರಾದ ಗಂಗಾಧರ ಆಳ್ವ ಸ್ವಾಗತಿಸಿದರು.ಜಯಂತ ನಾಯಕ್ ಪ್ರಸ್ತಾವನೆ ಗೈದರು. ಸುನಿಲ್ ಲೂವಿಸ್ ನಿರೂಪಿಸಿದರು. ಶಿವಶಂಕರ್ ಎನ್ ವಂದಿಸಿದರು.

ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರಿ ಸಂಘಕ್ಕೆ ನಡೆದ ಚುಣಾವಣೆಯಲ್ಲಿ ಗಂಗಾಧರ ಆಳ್ವ ಕೆ ಎನ್. , ಜಯಂತ ನಾಯಕ್ ಕೆ., ಸುನಿಲ್ ಲೂವಿಸ್, ಚಂದು ನಾಯ್ಕ, ರಂಜಿತ್, , ಶ್ರೀಧರ, ಸುಬ್ರಾಯ ರಾಮ ಮಡಿವಾಳ, ಶಿವಶಂಕರ್, ರವಿಕುಮಾರ್ , ಪದ್ಮನಾಭ, ಉμÁ ಪ್ರಭಾಕರ್, ಉಮಾವತಿ ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ.