Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಂದನಹಿತ್ತಿಲು ಶ್ರೀವೈದ್ಯನಾಥ ಅರಸು ಜುಮಾದಿಬಂಟ ದೇವಸ್ಥಾನಕ್ಕೆ ನೂತನ ದ್ವಜಸ್ತಂಭ ತರುವ ಕುರಿತು ನಡೆದ ಪೂರ್ವಭಾವಿ ಸಭೆ – ಕಹಳೆ ನ್ಯೂಸ್

ಬಂಟ್ವಾಳ: ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿಬಂಟ ದೇವಸ್ಥಾನಕ್ಕೆ ನೂತನ ದ್ವಜಸ್ತಂಭವನ್ನು ತರುವ ಬಗ್ಗೆ ಹಾಗೂ ಧ್ಬಜಸ್ತಂಭವನ್ನು ತೈಲಾಧಿವಾಸ ಮಾಡುವ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ತಯಾರಿ ಸಭೆ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಸುವರ್ಣ ನೇತ್ರತ್ವದಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊಡಿಮರವನ್ನು ಗ್ರಾಮದ ಯುವಕರು ಹೆಗಲಿಗೆ ಹೆಗಲು ಕೊಟ್ಟು ಹೊತ್ತುಕೊಂಡು ಮೆರವಣಿಗೆ ಮೂಲಕ ಬಂಟ್ವಾಳ ಪೇಟೆಯಲ್ಲಿ ದೇವಸ್ಥಾನಕ್ಕೆ ತರುವ ಯೋಚನೆ ಮಾಡಲಾಗಿದೆ.
ಇದರ ಜೊತೆಗೆ ವಿವಿಧ ಭಜನೆಯ ತಂಡಗಳು ಜೊತೆಯಾಗಲಿದೆ ಎಂದು ಅವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಡಿಮರವನ್ನು ಹೊತ್ತಕೊಂಡು ತರುವುದಕ್ಕಾಗಿ ಗ್ರಾಮದ ಸುಮಾರು 40 ಜನರ ಯುವಕರ ತಂಡ ಸಿದ್ದವಾಗಿದ್ದು, ಶುದ್ದಚಾರದಲ್ಲಿ ಕಳಸ ನೀರು ಸ್ನಾನ ಮಾಡಿ ಬಳಿಕ ಕೊಡಿಮರಕ್ಕೆ ಹೆಗಲು ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು. ಕೊಡಿಮರದ ಕೆತ್ತನೆಯ ಕೆಲಸ ಅಂತಿಮ ಹಂತದಲ್ಲಿದ್ದು, ಕೊಡಿಮರವನ್ನು ದೇವಸ್ಥಾನಕ್ಕೆ ತರುವ ಕಾರ್ಯಕ್ರಮವನ್ನು ಯಾವರೀತಿ ಮಾಡುವುದು ಮತ್ತು ಪೂರಕ ಕೆಲಸವನ್ನು ಯಾವ ರೀತಿ ಮಾಡುವುದು ಎಂಬ ವಿಚಾರದ ಬಗ್ಗೆ ಚರ್ಚೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೈವಸ್ಥಾನಕ್ಕೆ ತಂದ ಬಳಿಕ ಕೊಡಿಮರದ ತೈಲಾಧಿವಾಸ ಬಗ್ಗೆಯೂ ಚರ್ಚಿಸಲಾಯಿತು. ಮಾ.30 ಕ್ಕೆ ಕೊಡಿಮರದ ಪ್ರತಿಷ್ಟಾಪನೆ ಮಾಡಲಿರುವುದರಿಂದ ಅದಕ್ಕೆ ಪೂರ್ವಭಾವಿಯಾಗಿ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಚರ್ಚಿಸಿ ಫೆ.4 ರಂದು ಕೊಡಿಮರವನ್ನು ದೇವಸ್ಥಾನಕ್ಕೆ ತರುವ ಬಗ್ಗೆ ದಿನ ನಿಗದಿಮಾಡಲಾಗಿದೆ.

ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಮನೆತನದ ಸುದೀರ್ ಬಾಳಿಗ, ಪ್ರಮುಖರಾದ ರಾಮ್ ದಾಸ ಬಂಟ್ವಾಳ, ಅವಿನಾಶ್ ಕಾಮತ್, ಗಿರಿಪ್ರಕಾಶ್ ತಂತ್ರಿ, ಸಂಜೀವ ಪೂಜಾರಿ, ವಿಶ್ವನಾಥ ಪೂಜಾರಿ, ಲೋಕನಾಥ ಬಂಗೇರ,ವೆಂಕಪ್ಪ ಪೂಜಾರಿ, ಲೋಕೇಶ್ ಪೂಜಾರಿ,ಬಾಬು ಶೆಟ್ಟಿ, ಪ್ರವೀಣ್ ಶೆಣೈ ,ಕೊಡಿಮರದ ಕೆತ್ತನೆಕೆಲಸಗಾರ ಪ್ರವೀಣ್, ಮಹಾಬಲ ಬಂಟ್ವಾಳ ಮತ್ತಿತರ ಊರಿನ ಪ್ರಮುಖರು ಉಪಸ್ಥಿತರಿದ್ದರು.