Recent Posts

Monday, January 20, 2025
ಸುದ್ದಿ

ನರಿಕೊಂಬು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಮೂರು ಗ್ರಾಮ ಪಂಚಾಯತ್ ಗಳ ಕುಡಿಯುವ ನೀರಿನ ಯೋಜನೆಯ ಜಂಟಿ ಸಲಹಾ ಸಮಿತಿ ಸಭೆ – ಕಹಳೆ ನ್ಯೂಸ್

ಬಂಟ್ವಾಳ: ತಾಲೂಕಿನ ಗೋಳ್ತಮಜಲು, ಬಾಳ್ತಿಲ, ನರಿಕೊಂಬು ಗ್ರಾ.ಪಂ.ಗಳನ್ನೂಳಗೊಂಡ ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಂಟಿ ಸಲಹಾ ಸಮಿತಿ ಸಭೆ ನರಿಕೊಂಬು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ಜಂಟಿ ಸಲಹಾ ಸಮಿತಿಯ ಅಧ್ಯಕ್ಷ ನರಿಕೊಂಬು ಗ್ರಾ.ಪಂ. ಅಧ್ಯಕ್ಷರಾದ ಸಂತೋಷ ಕುಮಾರ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೂರು ಗ್ರಾಮ ಪಂಚಾಯತ್‍ಗಳ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆ ಸಮಸ್ಯೆಗಳಿಗೆ ಪರಿಹಾರೋಪಾಯ ಗಳ ಬಗ್ಗೆ ಹಾಗೂ ಬೇಸಿಗೆ ಸಂದರ್ಭ ಉಂಟಾಗುವ ನೀರಿನ ಸಮಸ್ಯೆಗಳಿಗೆ ತೆಗೆದು ಕೊಳ್ಳಬಹುದಾದ ಮುನ್ನೆಚ್ಚರಿಕೆ ಚರ್ಚಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಹುಗ್ರಾಮ ಸಮಿತಿ ಉಪಾಧ್ಯಕ್ಷರಾಗಿರುವ ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಅಣ್ಣು ಪೂಜಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಜಿ.ಕೆ. ನಾಯಕ್, ಗೊಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ. ಉಪಾಧ್ಯಕ್ಷ ಜಯಂತ್, ನರಿಕೊಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ ವಾಮನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಇಂಜಿನಿಯರ್ ಜಗದೀಶ್, ಮೆಸ್ಕಾಂ ಸಿಬ್ಬಂದಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖಾ ಸಿಬ್ಬಂದಿಗಳು, ಪಂಪು ಚಾಲಕರು ಉಪಸ್ಥಿತರಿದ್ದರು.