Recent Posts

Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಪುಂಜಾಲಕಟ್ಟೆ ದೈಕಿನಕಟ್ಟೆಯಲ್ಲಿ ಆಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ ಇಬ್ಬರು ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಆಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆಯ ಶುಭ ಸಂದರ್ಭದಲ್ಲಿ ಪುಂಜಾಲಕಟ್ಟೆ ದೈಕಿನಕಟ್ಟೆ ಎಂಬಲ್ಲಿ ಕೊರಗ ಸಮುದಾಯದ ಎಂಟು ಕುಟುಂಬಗಳಿಗೆ ಹಾಗೂ ಆಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ ಇಬ್ಬರು ಕರಸೇವಕರನ್ನು ಮಾಜಿ.ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ನೇತ್ರತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಆದಿವಾಸಿ ಜನಾಂಗದವರು ರಾಮನ ಜೊತೆ ಬೆರೆಯುತ್ತಿದ್ದರು ಎಂಬ ಕಾರಣಕ್ಕಾಗಿ ಕೊರಗ ಸಮುದಾಯದ ಕುಟುಂಬವನ್ನು ಗುರುತಿಸಿ ಗೌರವಿಸಲಾಗಿದೆ ಎಂದು ತುಂಗಪ್ಪ ಬಂಗೇರ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಮೇಶ್ ಕೊರಗ, ನಾರಾಯಣ ಕೊರಗ, ಐತ್ತಪ್ಪ ಕೊರಗ,ಸಂಜೀವ ಕೊರಗ, ತನಿಯ ಕೊರಗ ಸೇರಿದಂತೆ ಒಟ್ಟು 8 ಮಂದಿ ಕುಟುಂಬಕ್ಕೆ ಗೌರವ ನೀಡಲಾಗಿದೆ. ಇವರ ಜೊತೆಗೆ ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ಪಾಲ್ಗೊಂಡ ಲಿಂಗಪ್ಪ ಟೈಲರ್ ಹಾಗೂ ಪ್ರಭಾಕರ್ ಪಿ.ಎಂ.ಅವರನ್ನು ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ರಂಜಿತ್ ಮೈರ, ವೆಂಕಪ್ಪ ಪರವ, ಜನಾರ್ದನ ,ಕಾಂತಪ್ಪ ಪೂಜಾರಿ, ಯಶೋಧರ ಶೆಟ್ಟಿ ದಂಬೆ, ಕೃಷ್ಣಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು