ಬಂಟ್ವಾಳ : ಕಳೆಂಜ ಫೆ.14ರಂದು ನಡೆಯುವ ದೊಂಪದಬಲಿ ನೇಮೋತ್ಸವದ ಪೂರ್ವಭಾವಿ ಸಭೆಯು ಕಳೆಂಜ ಗುತ್ತಿನ ಮನೆಯಲ್ಲಿ ನಡೆಯಿತು. ಸಭೆಯ ಉದ್ದೇಶವನ್ನು ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್ ವಿವರಿಸಿದರು.
ಸಭೆಯಲ್ಲಿ ದೊಂಪದಬಲಿಯ ತಯಾರಿ ಹಾಗೂ ಸಂಬಂಧಿಸಿದ ಹಲವು ವಿಚಾರಗಳ ಮಾತುಕತೆ ನಡೆಯಿತು. ಈ ಸಂದರ್ಭದಲ್ಲಿ ಕಳೆಂಜ ಗುತ್ತಿನ ಶ್ರೀಮತಿ ಪದ್ಮಾಸಿನಿ ಜೈನ್, ಹಾಗೂ ಗೋಪಾಲ್ ಶೆಟ್ಟಿ ಕಳೆಂಜ, ಮತ್ತು ಟೀಮ್ ಕಳೆಂಜ ಗ್ರಾಮಸ್ಥರು ಸದಸ್ಯರು ಊರ ಭಕ್ತಾದಿಗಳು ಉಪಸ್ಥಿತರಿದ್ದರು.