Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ಇದರ ವತಿಯಿಂದ ಶ್ರೀ ನಿಕೇತನ ಮಂದಿರದಲ್ಲಿ ನಡೆದ ಶ್ರೀ ರಾಮ ಪೂಜಾ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ : ವೀರಕಂಭ ಗ್ರಾಮದ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ಇದರ ವತಿಯಿಂದ ಅಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಶ್ರೀ ರಾಮ ಪೂಜಾ ಕಾರ್ಯಕ್ರಮವು ಪುರೋಹಿತರಾದ ಉದಯ ಭಟ್ ನಂದಾವರ ಅವರ ನೇತೃತ್ವದಲ್ಲಿ ಕೆಲಿಂಜ ಶ್ರೀನಿಕೇತನ ಮಂದಿರದಲ್ಲಿ ನಡೆಯಿತು.

ಪ್ರಗತಿಪರ ಕೃಷಿಕ ಸತ್ಯಸುಂದರ ಭಟ್ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಕ್ತಾಧಿಗಳಿಗೆ ಅಯೋಧ್ಯಯಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರ ಹಾಗೂ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು