Monday, January 20, 2025
ಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆದರ್ಶರಾಮ ಸ್ಮರಣೆ – ಕಹಳೆ ನ್ಯೂಸ್

ಪುತ್ತೂರು : ದುರಾದೃಷ್ಟವಶಾತ್ ನಮ್ಮದೇ ಪುಣ್ಯಭೂಮಿ ಪಡೆಯಲು ಕಾನೂನು, ರಾಜಕೀಯ ಹೋರಾಟ ಕೊನೆಗೆ ರಕ್ತಪಾತವೂ ಆಗಬೇಕಾಯಿತು. ನಮ್ಮ ಪುಣ್ಯಭೂಮಿ ಅಯೋಧ್ಯೆಯನ್ನು ಪಡೆಯಲು ಶತಮಾಗಳಿಂದ ಕಾನೂನು ಹೋರಾಟ ಒಂದೆಡೆಯಾದರೆ, ಕರಸೇವಕರ ಹೋರಾಟದ ಇನ್ನೊಂದೆಡೆಯಾಗಿತ್ತು. ಈ ಎಲ್ಲಾ ತ್ಯಾಗ-ಬಲಿದಾನಗಳ ಫಲವಾಗಿ ಸುಪ್ರೀಂಕೋರ್ಟ್ ಪರಿಪೂರ್ಣ ಮತ್ತು ಐತಿಹಾಸಿಕ ನ್ಯಾಯಯುತವಾದ ತೀರ್ಪು ನೀಡಿತ್ತು ಎಂದು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಹಾಗೂ ನ್ಯಾಯವಾದಿ ಮುರಳಿಕೃಷ್ಣ ಕೆ. ಎನ್ ಹೇಳಿದರು.

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಶಿಕ್ಷಕ- ರಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಸ್ನಾತಕೋತ್ತರ ವಿಭಾಗಗಳ ಸಹಕಾರದೊಂದಿಗೆ ನಡೆದ ಆದರ್ಶರಾಮ ಸ್ಮರಣೆಯಲ್ಲಿ ‘ಅಯೋಧ್ಯೆಯ ವಿವಾದದ ಕುರಿತ ನ್ಯಾಯಾಲಯದ ಆದೇಶ’ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯರಿಗೆ ರಾಮಾಯಣ, ಮಹಾಭಾರತ ಇತಿಹಾಸವೂ ಹೌದು, ನಮ್ಮ ನಾಗರೀಕತೆಯನ್ನು ತಿಳಿದುಕೊಳ್ಳುವ ಅವಕಾಶವೂ ಹೌದು. ಇಷ್ಟು ಇತಿಹಾಸ ಹೊಂದಿರುವ ಅಯೋಧ್ಯೆ ತೀರ್ಪು ರಾಮ ಭಕ್ತರಿಗೆ ಪವಿತ್ರದುದು. ಈ ನಿಟ್ಟಿನಲ್ಲಿ ನಮಗೆ ನವೆಂಬರ್ 9, 2019ರಂದು ಇನ್ನೊಮ್ಮೆ ನಿಜವಾದ ಸ್ವಾತಂತ್ರ‍್ಯ ಸಿಕ್ಕಿದೆ ಎಂದರೆ ತಪ್ಪಾಗಲಾರದು. ಈ ಮಹತ್ವಪೂರ್ಣ ತೀರ್ಪಿನ ಹಿಂದಿರುವ ರೂವಾರಿಗಳಲ್ಲಿ ಕೆ ಕೆ ನಾಯರ್ ಕೂಡ ಒಬ್ಬರು, ಅವರ ನಿರಂತರ ಕಾನೂನು ಹೋರಾಟದಿಂದ ಇಂದು ನಮಗೆ ಜಯ ಸಿಕ್ಕಿದೆ. ಎಲ್ಲಿ ರಾಮನನ್ನು ಅಳಿಸುವುದಕ್ಕೆ ಪ್ರಯತ್ನಗಳಾಗಿತ್ತೋ ಇದೀಗ ಅಲ್ಲೇ ಶ್ರೀರಾಮನ ಪಟ್ಟಾಭಿಷೇಕವಾಗುತ್ತಿದೆ. ಹಾಗಾಗಿ ಅಸ್ಮಿತೆಯ ರಾಮಜನ್ಮಭೂಮಿ ನಮ್ಮೆಲ್ಲರ ಹೆಮ್ಮೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಕಬಕ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಸುಕುಮಾರ್, ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್, ಪರಿಕ್ಷಾಂಗ ಕುಲಸಚಿವ ಹಾಗೂ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ. ಶ್ರೀಧರ್ ಹೆಚ್. ಜಿ, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯ್ಕ್, ಬೋಧಕ ಮತ್ತು ಬೋಧಕೇತರ ವೃಂದದವರು, ಹಿರಿಯವಿದ್ಯಾರ್ಥಿ ಸಂಘದ ಸದಸ್ಯರು, ಹೆತ್ತವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಥಮ ಎಂಕಾಂ ವಿದ್ಯಾರ್ಥಿ ರಾಹುಲ್ ಸ್ವಾಗತಿಸಿ, ತೃತೀಯ ಬಿಕಾಂ ವಿದ್ಯಾರ್ಥಿ ನವೀನ ಕೃಷ್ಣ ವಂದಿಸಿದರು. ಕಾರ್ಯಕ್ರಮವನ್ನು ದ್ವಿತೀಯ ಬಿ ಎ ವಿದ್ಯಾರ್ಥಿನಿ ಶ್ರೇಯ ಎ ನಿರೂಪಿಸಿದರು.

(ಯಕ್ಷ-ಗಾನ-ನಾದ ವೈಭವ)
ಸಭಾ ಕಾರ್ಯ್ರಮದ ಬಳಿಕ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನೆರವೇರಿತು.

(ಉದ್ಘಾಟನೆ, ಗೌರವಾರ್ಪಣೆ)
ಶ್ರೀ ರಾಮೋತ್ಸವದ ಒಂಬತ್ತನೇ ದಿನದ ಕಾರ್ಯಕ್ರಮವನ್ನು ಕಾಲೇಜಿನ ಪರಿಚಾರಕಿ ಪುಷ್ಪವತಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಕೊನೆಯಲ್ಲಿ ರಾಮ ಭಾವಪೂಜೆಯ ಮೂಲಕ ಕಾರ್ಯಕ್ರಮವು ಸಂಪನ್ನಗೊಂಡಿತು. ಜೊತೆಗೆ ಈ ಸಂದರ್ಭದಲ್ಲಿ ಕಾಲೇಜಿನ ಪರಿಚಾರಕಿಯರಾದ ಪುಷ್ಪವತಿ ಮತ್ತು ಗೀತಾ ಇವರಿಗೆ ಗೌರವ ಸಮರ್ಪಿಸಲಾಯಿತು.