Recent Posts

Monday, January 20, 2025
ಪುತ್ತೂರುಸುದ್ದಿ

ಜ.24ರಂದು (ನಾಳೆ) ಕಲ್ಲೇಗ ಜಾತ್ರೋತ್ಸವ : ವಾಹನ ಸಂಚಾರದಲ್ಲಿ ಬದಲಾವಣೆ – ಕಹಳೆ ನ್ಯೂಸ್

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರಿನ 2ನೇ ಜಾತ್ರೆಯಂತಿರುವ ಕಲ್ಲೇಗ ಶ್ರೀ ಕಲ್ಕುಡ ದೇವಸ್ಥಾನದ ಕಲ್ಕುಡ-ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ಜ.24 ರಂದು ನಡೆಯಲಿದೆ.

ಜಾತ್ರೆಯ ಸಂದರ್ಭ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಟು ಕಲ್ಲೇಗ ದೇವಸ್ಥಾನ ತಲುಪುವ ಅಂದಾಜು ಸಮಯ 7.45 ರಿಂದ 9.15 ಗಂಟೆ ವರೆಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸುಗಮಕ್ಕೆ ಮಾರ್ಗ ಬದಲಾವಣೆ ಇದ್ದು ವಾಹನ ಚಾಲಕರು ಸೂಚನೆಗಳನ್ನು ಪಾಲಿಸುವಂತೆ ದೈವಸ್ಥಾನ ಮತ್ತು ಸಂಚಾರ ಪೊಲೀಸ್ ಠಾಣೆಯಿಂದ ಮನವಿ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಗಸೂಚಿ ಈ ಕೆಳಗಿನಂತಿದೆ.
1) ಪುತ್ತೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಮಂಜಲ್ಪಡ್ಪು ಕೋಡಿಪ್ಪಾಡಿ ಕಬಕ ಮೂಲಕ ಮಂಗಳೂರಿಗೆ ತೆರಳುವುದು.
2) ಮಂಗಳೂರಿನಿAದ ಪುತ್ತೂರು, ಮೈಸೂರು ಕಡೆಗೆ ತೆರಳುವ ವಾಹನಗಳು ಮುರ ದಿಂದ ರೈಲ್ವೆ ಬ್ರಿಡ್ಜ್ ಮೂಲಕ ಬನ್ನೂರು ಪಡೀಲ್ ಮೂಲಕ ಪುತ್ತೂರಿಗೆ ತೆರಳಬೇಕು.
3) ಕಲ್ಲೇಗ ಜಾತ್ರೆಗೆ ಬರುವ ಭಕ್ತಾದಿಗಳು ವಿವೇಕಾನಂದ ಕಾಲೇಜ್ ಹಾಗೂ ಪಾರ್ಕಿಂಗ್ ಯೋಗ್ಯ ಸ್ಥಳದಲ್ಲಿ ಪಾರ್ಕ್ ಮಾಡತಕ್ಕದ್ದು ರಸ್ತೆಯಲ್ಲಿ ನಿಲ್ಲಿಸಿ ಸಾರ್ವಜನಿಕರ ರಸ್ತೆ ಸಂಚಾರಕ್ಕೆ ತೊಡಕು ಉಂಟು ಮಾಡಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು