ಅಯೋಧ್ಯೆ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ : ಬಜಿಲಕೇರಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಉರುಳು ಸೇವೆಯ ಸಂಕಲ್ಪ ಈಡೇರಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್
ಮಂಗಳೂರು : ರಾಮಮಂದಿರದ ವಿವಾದ ನ್ಯಾಯಾಲಯದಲ್ಲಿ ಇದ್ದಂತಹ ಕಾಲದಲ್ಲಿ, “ತೀರ್ಪು ಮಂದಿರದ ಪರವಾಗಿಯೇ ಬರಬೇಕು, ಅಲ್ಲಿಯೇ ಮಂದಿರ ನಿರ್ಮಾಣವಾಗಬೇಕು” ಎಂದು ಬಜಿಲಕೇರಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಉರುಳು ಸೇವೆಯ ಸಂಕಲ್ಪವನ್ನು ಕೈಗೊಂಡಿದ್ದ ಶಾಸಕ ವೇದವ್ಯಾಸ್ ಕಾಮತ್ ಅವರು ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ತಮ್ಮ ಸಂಕಲ್ಪವನ್ನು ಈಡೇರಿಸಿಕೊಂಡರು.
ಕ್ಷೇತ್ರದ ಶಾಸಕನಾಗಿರುವಂತಹ ಸಂದರ್ಭದಲ್ಲಿ ಇಂತಹ ಅಪೂರ್ವ ಘಳಿಗೆಗೆ ಸಾಕ್ಷಿಯಾಗಿರುವುದು ನನ್ನ ಪಾಲಿನ ಜೀವಮಾನದ ಪರಮ ಪವಿತ್ರ ಭಾಗ್ಯ. ಇದಕ್ಕೆಲ್ಲ ಕಾರಣೀಭೂತರಾದ ಭಾರತದ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ, ವಿಶ್ವಹಿಂದೂ ಪರಿಷತ್ತಿಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ, ಹಾಗೂ ತ್ಯಾಗ ಬಲಿದಾನ ಹೋರಾಟದಲ್ಲಿ ಪಾಲ್ಗೊಂಡ ಎಲ್ಲಾ ಕರಸೇವಕರಿಗೆ ಈ ಸೇವೆ ಸಮರ್ಪಿತ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲದ ಬಿಜೆಪಿ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿ, ಮ.ನ.ಪಾ ಸದಸ್ಯರುಗಳಾದ ಶ್ರೀಮತಿ ಪೂರ್ಣಿಮಾ, ಪ್ರೇಮಾನಂದ ಶೆಟ್ಟಿ, ಭರತ್, ಗಣೇಶ್ ಕುಲಾಲ್, ಹಾಗೂ ನಿತಿನ್ ಕುಮಾರ್, ರಮೇಶ್ ಹೆಗ್ಡೆ, ಪೂರ್ಣಿಮಾ ರಾವ್, ವಿನೋದ್ ಮೆಂಡನ್, ಅಮರ್, ಚಂದ್ರಕಾಂತ ನಾಯಕ್, ಮುರಳಿಧರ್ ನಾಯಕ್, ವಿಜೇಂದ್ರ ಗಡಿಯಾರ್, ವಿದ್ಯಾ ಕುಡ್ವ, ಸುರೇಖಾ ರಾವ್, ಗಿರೀಶ್ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು