ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳು : ಭಜನೋತ್ಸವದೊಂದಿಗೆ ಸಂಪನ್ನಗೊಂಡ ಶ್ರೀರಾಮ ವೈಭವ ಕಾರ್ಯಕ್ರಮ – ಕಹಳೆ ನ್ಯೂಸ್
ಮಂಗಳೂರು : ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ಶ್ರೀರಾಮ ವೈಭವ ಭಜನೋತ್ಸವ ಕಾರ್ಯಕ್ರಮ ಕೆನರಾ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಕೃಷ್ಣಮಂದಿರದ ಶ್ರೀರಾಮ ದರ್ಬಾರ್ ನಲ್ಲಿ ನಡೆಯಿತು.
ಸೀತಾ ಸಹಿತ ಶ್ರೀ ರಾಮನ ದಿವ್ಯಮೂರ್ತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಮುಂಜಾನೆಯಿಂದಲೇ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕ ವರ್ಗದವರು ರಾಮನಾಮದ ಮಹಿಮೆಯನ್ನು ಸಾರುವ ಭಜನೆಗಳನ್ನು ಹಾಡಿದರು. ಮಧ್ಯಾಹ್ನ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಸುಂದರ ಕ್ಷಣವನ್ನು ನೇರ ಪ್ರಸಾರದ ಮೂಲಕ ನೋಡುವ ವ್ಯವಸ್ಥೆಯನ್ನು ಮಾಡಲಾಯಿತು.
ಕೆನರಾ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಎಂ ರಂಗನಾಥ್ ಭಟ್, ಸಹ ಖಜಾಂಚಿ ಶ್ರೀ ಎಂ ಜಗನ್ನಾಥ್ ಕಾಮತ್,ಸದಸ್ಯರಾದ ಶ್ರೀ ಸುರೇಶ್ ಕಾಮತ್, ಶ್ರೀ ಬಸ್ತಿ ಪುರುಷೋತ್ತಮ ಶೆಣೈ, ಶ್ರೀ ಗೋಪಾಲಕೃಷ್ಣ ಶೆಣೈ, ಶ್ರೀ ನರೇಶ್ ಶೆಣೈ , ಶ್ರೀಮತಿ ಅಶ್ವಿನಿ ಕಾಮತ್, ಶ್ರೀ ಶಿವಾನಂದ ಶೆಣೈ, ಶ್ರೀ ರಾಘವೇಂದ್ರ ಕುಡ್ವ,ಶ್ರೀ ಯೋಗೀಶ್ ಕಾಮತ್,ಪಿ ಆರ್ ಒ ಶ್ರೀಮತಿ ಉಜ್ವಲ್ ಮಲ್ಯ,ಕೆನರಾ ಸಹೋದರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳ ಪೋಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.