Sunday, January 19, 2025
ಉಡುಪಿಕುಂದಾಪುರಸುದ್ದಿ

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾದ ಕುಂದಾಪುರ ಪುರಸಭೆ ಬೀದಿಬದಿ ವ್ಯಾಪಾರಸ್ಥ ಮಣಿಕಂಠ ನಿರ್ಮಲ ದಂಪತಿ – ಕಹಳೆ ನ್ಯೂಸ್

ಉಡುಪಿ : ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಂದಾಪುರ ಪುರಸಭೆ ಬೀದಿಬದಿ ವ್ಯಾಪಾರಸ್ಥ ದಂಪತಿಗಳಾದ ಶ್ರೀಮಣಿಕಂಠ ಹಾಗೂ ಶ್ರೀಮತಿ ನಿರ್ಮಲ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಉಡುಪಿ ಜಿಲ್ಲೆ, ಪಿಎಂಸ್ವ್ ನಿಧಿ ಯೋಜನೆಯಡಿಯಲ್ಲಿ ಇವರು ಆಯ್ಕೆಯಾಗಿದ್ದು, ಈ ದಂಪತಿಗಳನ್ನು ಪುರಸಭೆ ಕಛೇರಿಯಲ್ಲಿ ಅಭಿನಂದಿಸಿ ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಮಾನ್ಯ ಸಹಾಯಕ ಆಯುಕ್ತ ಹಾಗೂ ಪುರಸಭಾ ಆಡಳಿತ ಅಧಿಕಾರಿ ಶ್ರೀಮತಿ ರಶ್ಮಿ ಇವರ ಸಹಕಾರದಲ್ಲಿ ಈ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಆರ್ ಮಂಜುನಾಥ್, ಜಿಲ್ಲಾ ಲೀಡಕರ್ ನಿಗಮದ ಸಂಯೋಜಕ ತಿಪ್ಪೆಸ್ವಾಮಿ, ಪುರಸಭೆ ಸದಸ್ಯೆ ಶ್ರೀಮತಿ ದೇವಕಿ ಸಣ್ಣಯ್ಯ, ಹಾಗೂ ಶ್ರೀ ಪ್ರಭಾಕರ್, ಪುರಸಭಾ ಪರಿಸರ ಅಭಿಯಂತ ಶ್ರೀ ಗುರು ಪ್ರಸಾದ್ ಶೆಟ್ಟಿ, ಸಮುದಾಯದ ಸಂಘಟನಾಧಿಕಾರಿ ಶರತ್ ಎಸ್ ಖಾರ್ವಿ, ಕಂದಾಯ ಅಧಿಕಾರಿ ಶ್ರೀಮತಿ ಅಂಜನಿ ಗೌಡ, ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯ್ಕ್, ಮತ್ತು ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.