Recent Posts

Sunday, January 19, 2025
ಸುದ್ದಿ

ಅಯೋಧ್ಯೆ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆ : ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆ ಹಾಗೂ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಚಂದ್ರನ ಶಿಲಾಮಯ ಮೂರ್ತಿಗೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಪ್ರಯುಕ್ತ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ನೇರಪ್ರಸಾರ ಹಾಗೂ ಅಯೋಧ್ಯೆ ಕರ ಸೇವಕರನ್ನು ಸನ್ಮಾನ ಕಾರ್ಯಕ್ರಮ ನಡೆಯಿತು.

ಶಾಸಕರಾದ ಡಾ.ಭರತ್ ಶೆಟ್ಟಿ ವೈ, ಆರ್ ಎಸ್ ಎಸ್ ಪ್ರಮುಖರಾದ ಪಿ.ಎಸ್ ಪ್ರಕಾಶ್ ಭಾಗವಹಿಸಿ ಕರಸೇವಕರನ್ನು ಸಮ್ಮಾನಿಸಿದರು. ಇದೇ ಸಂದರ್ಭ ಭಜನೆ ಹಾಗೂ ನೆರೆದ ರಾಮ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.ಆರ್ ಎಸ್ ಎಸ್ , ವಿಎಚ್ ಪಿ,ಬಜರಂಗದಳ,ಬಿಜೆಪಿ ಸಹಿತ ವಿವಿಧ ಸಂಘಗಳ ಪ್ರಮುಖರು,ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು