Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬೊಳ್ಳಮೆ ಆಂಜನೇಯ ಭಜನಾ ಮಂದಿರ ಲೋಕಾರ್ಪಣೆ : ಪುತ್ತೂರು ಶಾಸಕ ಅಶೋಕ್ ರೈ ಭಾಗಿ – ಕಹಳೆ ನ್ಯೂಸ್

ಪುತ್ತೂರು: ರಾಜಕೀಯದವರು ತಮ್ಮ ಲಾಭಕ್ಕೋಸ್ಕರ ಯಾರದ್ದೋ ಮಕ್ಕಳನ್ನು ಬಲಿಪಶು ಮಾಡುವ ಚಾಲ್ತಿ ಇದ್ದು ಕೆಟ್ಟ ಚಟುವಟಿಕೆಯಲ್ಲಿ ನಿಮ್ಮ ಮಕ್ಕಳು ಭಾಗಿಗಳಾಗಿ ಅವರು ಜೀವನ ಪೂರ್ತಿ ಕೋರ್ಟು, ಕೇಸು ಅಲೆದಾಡದಂತೆ ನೋಡಿಕೊಳ್ಳಿ ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ಪೋಷಕರಿಗೆ ಎಚ್ಚರಿಕೆ ಮಾತುಗಳನ್ನು ನೀಡಿದ್ದಾರೆ.

ರಾಜಕೀಯದವರು ತಮ್ಮ ಲಾಭಕ್ಕೆ ಏನು ಬೇಕಾದರೂ ಭಾಷಣ ಮಾಡಬಹುದು, ಅವರ ಭಾಷಣ ಕೇಳಿ ಯುವ ಸಮೂಹ ಹಾಳಾಗದಂತೆ ಎಚ್ಚರವಹಿಸಬೇಕು. ನೀವು ಒಂದು ಬಾರಿ ಕೇಸು ಮೈಮೇಲೆ ಹಾಕಿಕೊಂಡರೆ ಮತ್ತೆ ಜೀವನ ಪೂರ್ತಿ ನೀವಿ ಕೋರ್ಟಿಗೆ ಅಲೆದಾಡಬೇಕಾಗುತ್ತದೆ , ಸಮಾಜದಲ್ಲಿ ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಬಾಳಿ ಬದುಕುವ ಮೂಲಕ ಜೀವನ ರೂಪಿಸಿಕೊಳ್ಳಿ , ನೀವು ಜೀವನದಲ್ಲಿ ಸೋತಗ ನಿಮ್ಮ ಜೊತೆ ಯಾರೂ ಇರುವುದಿಲ್ಲ ಕೊನೆಯವರೆಗೂ ನಿಮ್ಮ ಜೊತೆ ಇರುವುದು ನಿಮ್ಮ ತಂದೆ ತಾಯಿ ಅವರ ಕಣ್ಣಲ್ಲಿ ನೀರು ಭರಿಸುವ ಕೆಲಸವನ್ನು ಯಾರೂ ಮಾಡಬರದು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೊಳ್ಳಮೆ ಆಂಜನೇಯ ಭಜನಾಮಂದಿರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾತದಲ್ಲಿ ಎಲ್ಲಾ ಜಾತಿ, ಧರ್ಮದ ಜನರಿದ್ದಾರೆ, ದೇಶದಲ್ಲಿರುವ ಎಲ್ಲಾ ಧರ್ಮದ ಜನರೂ ಪರಸ್ಪರ ಅಣ್ಣ ತಮ್ಮಂದಿರAತೆ ಬಾಳಿದರೆ ಮಾತ್ರ ದೇಶ ಅಭಿವೃದ್ದಿಯಾಗಲು ಸಾಧ್ಯ, ಭಾರತ ವಿಶ್ವಗುರುವಾಗಲು ಸಾಧ್ಯ ಭಾಷಣದಿಂದ ಭಾರತ ವಿಶ್ವಗುರುವಾಗಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜ.22 ರಂದು ಶ್ರೀರಾಮಮಂದಿರ ಲೋಕಾರ್ಪಣೆಯಾಗಿದೆ, ದೇಶದಲ್ಲಿ ಅದಾಗ್ತದೆ, ಇದಾಗ್ತದೆ ಎಂದು ಆತಂಕದ ಮಾತುಗಳನ್ನು ಕೆಲವರು ಹೇಳಿದ್ದರು. ಆದರೆ ರಾಮಮಂದಿರ ಲೋಕಾರ್ಪಣೆ ದಿನ ದೇಶದಲ್ಲಿ ಎಲ್ಲೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ , ಅಹಿತಕರ ಘಟನೆ ನಡೆಯುವುದು ಯರಿಗೂ ಬೇಕಾಗಿಲ್ಲ, ಜನ ಪ್ರತೀ ದಿನವೂ ನೆಮ್ಮದಿಯನ್ನು ಬಯಸುತ್ತಾರೆ ಎಂದು ಹೇಳಿದರು. ದೇಶ ಅಭಿವೃದ್ದಿಯಗಬೇಕಾದರೆ ಇಲ್ಲಿರುವ ಪ್ರತೀಯೊಬ್ಬರೂ ಪರಸ್ಪರ ಸಾಹೋದರ್ಯತೆಯಿಂದ ಬಾಳಬೇಕಾದ ಅಗತ್ಯವಿದೆ ಎಂದು ಹೇಳಿದರು.