Monday, January 20, 2025
ದಕ್ಷಿಣ ಕನ್ನಡಸುದ್ದಿ

ದೇವಸ್ಥಾನ-ಸಂಸ್ಕೃತಿಯ ರಕ್ಷಣೆಗಾಗಿ ಜನವರಿ 26 ರಂದು ದಕ್ಷಿಣ ಕನ್ನಡ ‘ಜಿಲ್ಲಾಮಟ್ಟದ ದೇವಸ್ಥಾನಗಳ ಪರಿಷತ್ತು : ದೇವಸ್ಥಾನಗಳ ಸರಕಾರೀಕರಣ, ದೇವಸ್ಥಾನಗಳ ಮೇಲಿನ ಆಘಾತ, ವಿವಿಧ ವಿಷಯಗಳ ಕುರಿತು ಚರ್ಚೆ-ಕಹಳೆ ನ್ಯೂಸ್

ಮಂಗಳೂರು – ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರಗಳು. ದೇವಸ್ಥಾನಗಳಲ್ಲಿನ ದೈವಿಚೈತನ್ಯದಿಂದಾಗಿ ಆಧುನಿಕ ಕಾಲದಲ್ಲಿಯೂ ಸಮಾಜವು ದೇವಸ್ಥಾನಗಳ ಕಡೆಗೆ ಆಕರ್ಷಿತವಾಗುತ್ತಿದೆ. ಆದರೆ ಇತ್ತೀಚೆಗೆದೇವಸ್ಥಾನಗಳ ಮೇಲೆ ವಿವಿಧ ರೀತಿಯ ಆಕ್ರಮಣಗಳು ನಡೆಯುತ್ತಿವೆ. ಉದಾಹರಣೆಗೆ ದೇವಸ್ಥಾನಗಳ ಸರಕಾರಿಕರಣ,ದೈವಸ್ಥಾನಗಳನ್ನು ಅಪವಿತ್ರಗೊಳಿಸುವುದು, ಮೂರ್ತಿಭಂಜನ, ಅನಧಿಕೃತವೆಂದು ದೇವಸ್ಥಾನಗಳನ್ನುಧ್ವಂಸಗೊಳಿಸುವುದು, ದೇವಸ್ಥಾನಗಳ ಜಮೀನುಗಳ ಲೂಟಿ, ದೇವನಿಧಿ ಅಪವ್ಯಯ, ಹೀಗೆ ಮುಂತಾದ ಸಮಸ್ಯೆಗಳುಮುಗಿಲು ಮುಟ್ಟಿದೆ. ಅದಕ್ಕಾಗಿ ದೇವಸ್ಥಾನಗಳಲ್ಲಿನ ದೇವತಾತತ್ತ್ವವನ್ನು ಕಾಪಾಡಲು, ದೇವಸ್ಥಾನಗಳಲ್ಲಿ ಧರ್ಮಪ್ರಸಾರ ಮಾಡಲು, ದೇವಸ್ಥಾನಗಳಲ್ಲಿ ಭಕ್ತಾಧಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು, ದೇವಸ್ಥಾನಗಳ ಸಂಘಟನೆಮಾಡಲು, ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅಳವಡಿಸಲು ‘ತೆಂಕಕಾರAದೂರಿನ ಶ್ರೀವಿಷ್ಣುಮೂರ್ತಿ ದೇವಸ್ಥಾನ,ರೆಖ್ಯ- ಗುಡ್ರಾದಿಯ ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನ, ಹಿಂದೂ ಜನಜಾಗೃತಿ ಸಮಿತಿ ಮತ್ತು ಕರ್ನಾಟಕದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯುಕ್ತ  ಆಶ್ರಯದಲ್ಲಿ ಜನವರಿ 26 2023 ರಂದುಮAಗಳೂರಿನ ಕಾರ್ ಸ್ಟ್ರೀಟ್ ನಲ್ಲಿನ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ‘ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು’ಆಯೋಜಿಸಲಾಗಿದೆ. ಈ ಪರಿಷತ್ತಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ 300 ಕ್ಕಿಂತ ಹೆಚ್ಚು ಆಮಂತ್ರಿತ ದೇವಸ್ಥಾನಗಳವಿಶ್ವಸ್ಥರು, ಅರ್ಚಕರು, ಪುರೋಹಿತರು, ಪ್ರತಿನಿಧಿಗಳು, ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು,ಧಾರ್ಮಿಕ ಚಿಂತಕರು, ಮುಂತಾದವರು ಪಾಲ್ಗೊಳ್ಳಲಿದ್ದಾರೆ, ಎಂದು ‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದ ಸಂಯೋಜಕರಾದ ಶ್ರೀ. ಮೋಹನ ಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಕೋಲ ಮೂಕಾಂಬಿಕಾ ದೇವಸ್ಥಾನದ ವಿಶ್ವಸ್ಥರಾದ ಶ್ರೀ. ಮಧುಸೂದನ ಅಯ್ಯರ್, ನೀರೆಶ್ವಾಲ್ಯ ಹೊಯ್ಗೆ ಬಜಾರ್ ನ ಅಧ್ಯಕ್ಷರಾದ ಶ್ರೀ. ಮಧುಕರ, ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದ ವ್ಯವಸ್ಥಾಪನಾ ವಿಶ್ವಸ್ಥರಾದ ಶ್ರೀ.ಅಶೋಕ್ ಶೆಣೈ, ರೆಖ್ಯ ಗುಡ್ರಾದಿ ಗುಡ್ರಾಮಲ್ಲೇಶ್ವರ ದೇವಸ್ಥಾನದ ಸಂಚಾಲಕರಾದ ಶ್ರೀ. ಬಾಲಕೃಷ್ಣ ಗೌಡ,ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ. ಮೋಹನ ಗೌಡ ಇವರು ಮುಂದೆ ಮಾತನಾಡಿ ಮಹಾಸಂಘವು ಕೇವಲ 6 ತಿಂಗಳುಗಳಲ್ಲಿ ದೇಶದಾದ್ಯಂತ275 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ(ಡ್ರೆಸ್ ಕೋಡ್) ಜಾರಿಗೆ ತಂದಿದೆ ಮತ್ತು ಮಹಾಸಂಘದ ಅಭಿಯಾನದಿಂದ ಪ್ರೇರಿತಾರದ ಅನೇಕ ವಿಶ್ವಸ್ಥರು ತಮ್ಮ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುತ್ತಿದ್ದಾರೆ. ಈ ಪರಿಷತ್ತಿಗೆ ಜಿಲ್ಲೆಯಅನೇಕ ಕಡೆಗಳಿಂದ 300 ಕ್ಕಿಂತ ಹೆಚ್ಚು ವಿಶ್ವಸ್ಥರು ಉಪಸ್ಥಿತರಿರಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪರಿಷತ್ತಿನಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಜಿತಕಾಮಾನಂದ, ಕಟೀಲು ದುರ್ಗಾಪರಮೇಶ್ವರಿದೇವಸ್ಥಾನದ ಶ್ರೀಹರಿನಾರಾಯಣದಾಸ ಆಸ್ರಣ್ಣ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ದೇವಸ್ಥಾನ ಪರಿಷತ್ತಿನಲ್ಲಿಗಣ್ಯರ ಮಾರ್ಗದರ್ಶನ, ದೇವಸ್ಥಾನಗಳಿಗೆ ಸಂಬAಧಿಸಿದAತೆ ಆಯ್ದ ವಿವಿಧ ವಿಷಯಗಳ ಚರ್ಚಾಕೂಟಗಳುನಡೆಯಲಿವೆ. ಇದರಲ್ಲಿ ‘ದೇವಸ್ಥಾನಗಳನ್ನು ಸನಾತನ ಧರ್ಮಪ್ರಸಾರ ಕೇಂದ್ರಗಳನ್ನಾಗಿಸುವುದು’, ‘ದೇವಸ್ಥಾನಗಳನ್ನುಸರಕಾರೀಕರಣದಿಂದ ಮುಕ್ತಮಾಡುವುದು’ ಅನಧಿಕೃತ ಹೆಸರಿನಲ್ಲಿ ದೇವಸ್ಥಾನಗಳನ್ನು ಧ್ವಂಸಗೊಳಿಸುವುದು,ಅನ್ಯಮತೀಯರಿAದ ದೇವಸ್ಥಾನಗಳ ಭೂಮಿಯ ಅತಿಕ್ರಮಣ ಮತ್ತು ಸರಕಾರವು ದೇವಸ್ಥಾನಗಳನ್ನುವಶಪಡಿಸಿಕೊಳ್ಳುವುದರ ವಿರುಧ್ಧ ಪರಿಹಾರೋಪಾಯ, ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳ ಪರಿಸರದಲ್ಲಿಮದ್ಯ-ಮಾಂಸ ಇವುಗಳ ನಿಷೇಧ; ದುರ್ಲಕ್ಷಿತ ದೇವಸ್ಥಾನಗಳ ಜೀರ್ಣೋದ್ಧಾರ ಮುಂತಾದ ವಿಷಯಗಳ ಮೇಲೆಚರ್ಚೆ ನಡೆಯಲಿದೆ. ಈ ಅಧಿವೇಶನವು ಕೇವಲ ಆಮಂತ್ರಿತರಿಗೆ ಮಾತ್ರ ಇದ್ದು ಅಧಿವೇಶನದಲ್ಲಿ ಪಾಲ್ಗೊಳ್ಳಲು7204082658 ಈ ಮೊಬೈಲ್ ನಂ.ಗೆ ಸಂಪರ್ಕಿಸಬೇಕು ಎಂದು ದೇವಸ್ಥಾನ ಮಹಾಸಂಘವು ಕರೆ ನೀಡಿದೆ”,ಎಂದು ಹೇಳಿದರು.

ತಮ್ಮ ಸವಿನಯ,
ಶ್ರೀ. ವಿಜಯ ಕುಮಾರ್, ಸಂಯೋಜಕರು,
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ದಕ್ಷಿಣ ಕನ್ನಡ ಜಿಲ್ಲೆ
(ಸಂಪರ್ಕ : 7204082658)