Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

ಬೂತ್ ಮಟ್ಟದಿಂದ ಪಕ್ಷದ ಕಾರ್ಯಕ್ರಮ, ಯೋಜನೆ ಅನುಷ್ಠಾನ-ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ ಹೇಳಿಕೆ.- ಕಹಳೆ ನ್ಯೂಸ್

ಪುತ್ತೂರು: ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಬಿಜೆಪಿಯಲ್ಲಿ ಹೊಸ ತಂಡಗಳು ರಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಹಳೆಯ ತಂಡ ಮತ್ತು ಹೊಸ ತಂಡ ಜೊತೆಗೂಡಿ ಪಕ್ಷದ ಸಂಘಟನೆಯ ಕೆಲಸ ಮಾಡಲಿದೆ. ಪಕ್ಷದ ಕಾರ್ಯಕ್ರಮ, , ಯೋಜನೆಗಗಳನ್ನು ಯಶಸ್ವಿಯಾಗಿ ಬೂತ್ ಮಟ್ಟದಿಂದ ಅನುಷ್ಠಾನಕ್ಕೆ ತರಲಿದ್ದೇವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ  ಕ್ಯಾ. ಬೃಜೇಶ್ ಚೌಟ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಬಿಜೆಪಿ ರಾಜ್ಯ ಕಾರ್ಯದರ್ಶಿ ಯಾದ ಬಳಿಕ ಪ್ರಥಮ ಭಾರಿಗೆ ಬುಧವಾರ ಪುತ್ತೂರಿಗೆ  ಭೇಟಿ ನೀಡಿದರು. ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ  ಮಾತುಕತೆ ನಡೆಸಿದರು.  ವಿಜಯೇಂದ್ರ ಅವರು ರಾಜ್ಯದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಹೊಸ ತಂಡ ರಚನೆಯಾಗಿದೆ. ಜಿಲ್ಲೆಯ ಅಧ್ಯಕ್ಷರ ಘೋಷಣೆಯೂ ಆಗಿದೆ. ತಿಂಗಳ ಅಂತ್ಯದೊಳಗೆ ಎಲ್ಲಾ ಮಂಡಲ, ಮೋರ್ಚಾಗಳ ತಂಡ ರಚನೆಯಾಗಲಿದೆ. ಬಳಿಕ ನಮ್ಮೆಲ್ಲರ ಗುರಿ  ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಚುನಾಯಿತಗೊಳಿಸುವ ಗುರಿಯೊಂದೇ ಆಗಿದೆ. ಹೊಸ ತಂಡ ಮತ್ತು ಹಿಂದಿದ್ದ ತಂಡ ಜೊತೆಯಾಗಿ ಚುನಾವಣೆಯಲ್ಲಿ ಕೆಲಸ ಮಾಡಲಿದ್ದೇವೆ. ಹಾಗಾಗಿ ಎಲ್ಲರೂ ಸಂಕಲ್ಪ ಇಟ್ಟುಕೊಂಡು ಕೆಲಸವನ್ನು ಮುಂದಿನ ಎರಡು ಮೂರು ತಿಂಗಳು ಮಾಡಲಿದ್ದೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಶಾಸಕ ಸಂಜೀವ ಮಠಂದೂರು,ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಮತ್ತಿತರರು ಉಪಸ್ಥಿತರಿದ್ದರು