Sunday, January 19, 2025
ಪುತ್ತೂರುರಾಜಕೀಯರಾಜ್ಯಸುದ್ದಿ

ಪುತ್ತೂರಿನ ಖಾಸಗಿ ಆಸ್ಪತ್ರೆಯ ಸಭಾ ಭವನದಲ್ಲಿ ನಿಷ್ಠಾವಂತ ಬಿಜೆಪಿ ಮತ್ತು ಸಂಘ ಪರಿವಾರ ಕಾರ್ಯಕರ್ತರ ಆಂತರಿಕ ಸಭೆ !? ಪುತ್ತಿಲ ಬಿಜೆಪಿ ಸೇರ್ಪಡೆ ಬಗ್ಗೆ ಮಹತ್ವದ ನಿರ್ಣಯ..!? – ಕಹಳೆ ನ್ಯೂಸ್

ಪುತ್ತೂರು : ಪುತ್ತಿಲ ಪರಿವಾರ ಮತ್ತು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಎರಡು ದಿನಗಳ ಹಿಂದೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಬಹುತೇಕ ಖಚಿತ ಎಂದು ಬಿಜೆಪಿ ಮತ್ತು ಪುತ್ತಿಲ ಪರಿವಾರದ ಮೂಲಗಳು ಹೇಳುತ್ತಿತ್ತು., ಈ ಹಿನ್ನೆಲೆಯಲ್ಲಿ ಇಂದು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪುತ್ತೂರಿನ ಖಾಸಗಿ ಆಸ್ಪತ್ರೆಯ ಸಭಾ ಭವನದಲ್ಲಿ ನಿಷ್ಠಾವಂತ ಬಿಜೆಪಿ ಮತ್ತು ಸಂಘ ಪರಿವಾರ ಕಾರ್ಯಕರ್ತರ ಆಂತರಿಕ ಸಭೆಯೊಂದು ನಡೆದಿದ್ದು, ನೂರಕ್ಕೂ ಅಧಿಕ ಪ್ರಮುಖ ತಾಲೂಕಿನ ಕಾರ್ಯಕರ್ತರು, ಸಂಘ ಪರಿವಾರದ ಪ್ರಮುಖ ಜವಾಬ್ದಾರಿ ಹೊಂದಿದ ಪ್ರಮುಖರು ಸೇರಿದ್ದು, ಹಲವು ಮಹತ್ವದ ನಿರ್ಣಯವನ್ನು ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತಿಲ ಬಿಜೆಪಿ ಸೇರ್ಪಡೆ ಬಗ್ಗೆ ಮಹತ್ವದ ನಿರ್ಣಯ..!?

ಜಾಹೀರಾತು
ಜಾಹೀರಾತು
ಜಾಹೀರಾತು

ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಮಾಡಲು ವ್ಯಾಪಕವಾಗಿ ವಿರೋಧ ವ್ಯಕ್ತವಾಯಿತು.

ನಂತರ ಪಕ್ಷದ ಹಿರಿಯರು ಸೇರ್ಪಡೆ ಗ್ರೀನ್ ಸಿಗ್ನಲ್ ನೀಡಿದಲ್ಲಿ,

* ಯಾವುದೇ ಪ್ರಮುಖ ಜವಾಬ್ದಾರಿ ನೀಡಬಾರದು ಮತ್ತು ಮೂರು ವರ್ಷ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಬಂದು ಮತ್ತೆ ಪಕ್ಷ ಸಂಘಟನೆಯ ಮಾಡಲಿ.

* ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಂಘ ಪರಿವಾರದ ಹಿರಿಯರಿಗೆ ಮತ್ತು ಪಕ್ಷ ಪ್ರಮುಖರ ವಿರುದ್ಧ ವಾಚಾಮಗೋಚರ ನಿಂದನೆ ಮಾಡಿದ್ದಕ್ಕೆ ಸಂಘದ ಪರಿವಾರ ಸಮನ್ವಯ ಬೈಠಕ್ ನಲ್ಲಿ ಬಹಿರಂಗ ಕ್ಷಮೆಯಾಚಿಸಲಿ.

* ಪುತ್ತಿಲ ಪರಿವಾರ ಬೇಷರತ್ತಾಗಿ ವಿಸರ್ಜಿಸಬೇಕು.

* ಲೋಕಸಭಾ ಸಭಾ ಚುನಾವಣೆಯಲ್ಲಿ ಕಾರ್ಯಕರ್ತನಾಗಿ ಬಿಜೆಪಿಯ ಪರ ಕೆಲಸ ಮಾಡಬೇಕು.

* ಪುತ್ತಿಲ ಪರಿವಾರ ನೀಡಿದ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯಬೇಕು.

ಎಂದು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.