Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸಂತಾಪಸುದ್ದಿ

ಬಂಟ್ವಾಳ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ – ಕಹಳೆ ನ್ಯೂಸ್

ಬಂಟ್ವಾಳ: ಅಪರಿಚಿತ ವ್ಯಕ್ತಿಯೊರ್ವನ ಮೃತದೇಹದ ವಾರೀಸುದಾರರ ಗುರುತು ಪತ್ತೆಗಾಗಿ ಪೋಲೀಸ್ ಇಲಾಖೆ ಮಾಧ್ಯಮ ಮೂಲಕ ಮನವಿ ಮಾಡಿದೆ. ಬಂಟ್ವಾಳ ‌ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಸರಕಾರಿ ಆಸ್ಪತ್ರೆಯಲ್ಲಿ ಕೃಷ್ಣಪ್ಪ ಎಂಬವರು ಅನಾರೋಗ್ಯದ ನಿಮಿತ್ತ ಚಿಕಿತ್ಸೆಗಾಗಿ ದಾಖಲಾಗಿದ್ದರು.

ಆದರೆ ವಿಪರೀತ ಅಸ್ವಸ್ಥಗೊಂಡಿದ್ದ ಇವರನ್ನು 108 ಅಂಬ್ಯುಲೆನ್ಸ್ ಮೂಲಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈತ ಜ.9 ರಂದು ಮೃತಪಟ್ಟ ಬಗ್ಗೆ ಅಲ್ಲಿನ ವೈದ್ಯರು ಪೋಲೀಸ್ ಇಲಾಖೆಗೆ ಮಾಹಿತಿ ನೀಡಿ ಶವಗಾರದಲ್ಲಿ ಇಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಕೃಷ್ಣಪ್ಪ ಎಂದು ಹೆಸರು ಬಿಟ್ಟು ಯಾವುದೇ ವಿಳಾಸ ನೀಡದೆ ಆಸ್ಪತ್ರೆಗೆ ದಾಖಲಾದ ಕಾರಣ ಇವರ ಕುಟುಂಬದವರನ್ನು ಹುಡುಕುವುದು ಕಷ್ಟವಾಗಿದೆ. ಹಾಗಾಗಿ ಇವರ ಗುರುತು ಪತ್ತೆಗಾಗಿ ಮಾಧ್ಯಮ ಮೂಲಕ ಮನವಿ ಮಾಡಿದೆ. ಇವರ ಗುರುತು ಸಿಕ್ಕಿದರೆ ಬಂಟ್ವಾಳ ನಗರ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡುವಂತೆ ಎಸ್. ಐ.ರಾಮಕೃಷ್ಣ ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು