Recent Posts

Sunday, January 19, 2025
ಬೆಂಗಳೂರುಸಿನಿಮಾಸುದ್ದಿ

‘ನನ್ನಲ್ಲೂ ಸಾಕ್ಷಿಗಳಿವೆ ‘ ; ವಿಜಯಲಕ್ಷ್ಮೀ ದರ್ಶನ್ ಗೆ ಕೌಂಟರ್ ಕೊಟ್ಟ ಪವಿತ್ರಾ ಗೌಡ – ಕಹಳೆ ನ್ಯೂಸ್

ಬೆಂಗಳೂರು, ಜ 26 : ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ದರ್ಶನ್​ ಜೊತೆ ಆತ್ಮೀಯವಾಗಿ ಕಾಣಿಸಿಕೊಂಡಿರುವ ಪವಿತ್ರಾ ಗೌಡ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕದನ ಶುರುವಾಗಿದೆ. ವಿಜಯಲಕ್ಷ್ಮೀ ಇನ್ಸ್ಟಾಗ್ರಾಂನಲ್ಲಿ ಮಾಡಿರುವ ಆರೋಪಕ್ಕೆ ಇದೀಗ ಪವಿತ್ರಾ ಗೌಡ ಕೌಂಟರ್ ಕೊಟ್ಟಿದ್ದಾರೆ.

ನಾನು ಪವಿತ್ರ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬುವವರನ್ನು ಮದುವೆಯಾಗಿದ್ದು, ಬಳಿಕ ಖುಷಿ ಹುಟ್ಟಿರುತ್ತಾಳೆ. ಕೆಲ ಕಾರಣದಿಂದ ನಾನು ಸಂಜಯ್ ದೂರಾಗಿದ್ದೇವೆ. ಇಲ್ಲಿಯವರೆಗೆ ಖುಷಿ ನಟ ದರ್ಶನ್ ಅವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ. ನಾನು ಮತ್ತು ದರ್ಶನ್ ಕಳೆದ 10 ವರ್ಷದಿಂದ ಸಂತೋಷವಾಗಿದ್ದೇವೆ. 10 ವರ್ಷಗಳ ಕಾಲ ಪರಿಶುದ್ಧ ಪ್ರೀತಿ ಹಾಗೂ ಕಾಳಜಿ ಇರುವುದು ಸುಲಭವಲ್ಲ. ಈ ವಿಷಯ ವಿಜಯಲಕ್ಷ್ಮೀ ಅವರಿಗೆ ಮೊದಲೇ ತಿಳಿದಿತ್ತು. ಅವರೇ ಸಾಕಷ್ಟು ಬಾರಿ ಕರೆ ಮಾಡಿ ಯಾವುದೇ ರೀತಿಯ ತೊಂದರೆ ಇಲ್ಲಾ ಎಂದು ಹೇಳಿದ್ದಾರೆ. ಅದರ ಕೆಲ ಸಾಕ್ಷಿ ಹಾಗು ವಿಚ್ಛೇದನ ಪತ್ರವನ್ನು ಸಮಯ ಬಂದಾಗ ಹಂಚಿಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ವಿಜಯಲಕ್ಷ್ಮೀ ಅವರು ನನ್ನ ವಿರುದ್ಧ ಪೋಸ್ಟ್ ಮಾಡುತ್ತಿರುವುದರಿಂದ ನನಗೆ ಬೇಸರವಾಗಿದೆ. ವಿಜಯಲಕ್ಷ್ಮೀ ದರ್ಶನ್ ಎಂಬ ಇನ್ ಸ್ಟಾಗ್ರಾಂ ಖಾತೆ ನನ್ನ ಹಾಗೂ ನನ್ನ ಮಗಳ ಬಗ್ಗೆ ಬಹಳಷ್ಟು ಕೆಟ್ಟ ಪದಗಳಿಂದ ನಿಂದಿಸುತ್ತಿದೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ನನ್ನ ವಿಚಾರಗಳನ್ನು ಹಾಗೂ ನನ್ನ ವೈಯಕ್ತಿಕ ಪೋಟೊಗಳನ್ನು ಹಂಚಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಪವಿತ್ರಾ ಗೌಡ ಅವರು ಎಚ್ಚರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು