Sunday, November 24, 2024
ಸುದ್ದಿ

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಜನವರಿ 26 ದೇಶದ ಶಕ್ತಿಪ್ರದರ್ಶನದ ದಿನವೂ ಹೌದು : ಎನ್.ಎಸ್.ನಟರಾಜ್ – ಕಹಳೆ ನ್ಯೂಸ್

ಪುತ್ತೂರು: ಗಣರಾಜ್ಯೋತ್ಸವ ಕೇವಲ ಒಂದು ಆಚರಣೆಯಷ್ಟೇ ಅಲ್ಲ. ದೇಶದ ಶಕ್ತಿ ಸಾಮರ್ಥ್ಯವನ್ನು, ಆಚಾರ ವಿಚಾರಗಳನ್ನು ಪ್ರಪಂಚದ ಮುಂದೆ ತೆರೆದಿಡುವ ದಿನವೂ ಹೌದು. ಹಾಗಾಗಿಯೇ ಜನವರಿ 26ರಂದು ದೆಹಲಿಯಲ್ಲಿ ವಿದೇಶಿ ಗಣ್ಯರ ಸಮ್ಮುಖದಲ್ಲಿ ಭಾರತದ ವಿವಿಧ ಎನ್‌ಸಿಸಿ, ಎನ್.ಎಸ್.ಎಸ್ ಅಲ್ಲದೆ ವಿವಿಧ ಶಸ್ತç ಪಡೆಗಳ ಪೆರೇಡ್ ಹಾಗೂ ಸ್ಥಬ್ಧ ಚಿತ್ರಗಳ ಪ್ರದರ್ಶನವೂ ನಡೆಯುತ್ತದೆ ಎಂದು ಪುತ್ತೂರಿನ ಹಿರಿಯ ತೆರಿಗೆ ಮಾರ್ಗದರ್ಶಕ ಎನ್.ಎಸ್ ನಟರಾಜ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಯೋಜಿಸಲಾದ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿ ಧ್ವಜಾರೋಹಣಗೈದು ಶುಕ್ರವಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕಳೆದ ಒಂದು ಸಾವಿರ ವರ್ಷಗಳಲ್ಲಿ ಭಾರತದ ಮೇಲೆ ಅನೇಕ ದಾಳಿಗಳಾಗಿವೆ. ಈಗ ಸ್ವತಂತ್ರ ದೇಶದಲ್ಲಿದ್ದರೂ ದಾಸ್ಯದ ಮನೋಭಾವದಿಂದ ಪೂರ್ಣವಾಗಿ ಮುಕ್ತರಾಗಿಲ್ಲ. ಇದೀಗ ಪರಿವರ್ತನೆಯ ಸಮಯ. ನಮ್ಮತನವನ್ನು ಸಾರುವ ನೆಲೆಯಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ನಾವು ವಿದೇಶದಲ್ಲಿ ಕೆಲಸ ಮಾಡುವ ಬದಲು ವಿದೇಶಿಗರನ್ನು ನಮ್ಮಲ್ಲಿ ದುಡಿಸುವ ಪ್ರಯತ್ನಕ್ಕಿಳಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ ಕಮ್ಮಜೆ, ಕ್ಯಾಂಪಸ್ ನಿರ್ದೇಶಕ ರಾಜೇಂದ್ರ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಉಪಪ್ರಾಂಶುಪಾಲ ಗಣೇಶ್ ಪ್ರಸಾದ್, ಮುಖ್ಯನಿಲಯಪಾಲಕ ಆಶಿಕ್ ಬಾಲಚಂದ್ರ, ಬೋಧಕ ಬೋಧಕೇತರ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿ ಪ್ರಿಯಾಂಶು ಗಣರಾಜ್ಯೋತ್ಸವದ ನೆಲೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿನಿ ಸೋನಾ ಪೃಥ್ವಿ ಸ್ವಾಗತಿಸಿ, ಐಷಿಣಿ ರೈ ವಂದಿಸಿದರು. ವಿದ್ಯಾರ್ಥಿನಿ ದ್ವಿತಿ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು