Sunday, November 24, 2024
ಸುದ್ದಿ

ಅಯೋಧ್ಯಾ ಪ್ರಸಾದ್‌‌ ಹೆಸರಿನಲ್ಲಿ ಲಡ್ಡು ಮಾರಾಟ ಮಾಡಿದ್ದ ಅಮೆಜಾನ್‌ ಮೇಲೆ ಕೇಸ್‌..!– ಕಹಳೆ ನ್ಯೂಸ್

ದೇಶದೆಲ್ಲೆಡೆ ಶ್ರೀ ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಜೋರಾಗಿದೆ. ಭಕ್ತಿ ಭಾವದಿಂದ ಕೂಡಿರುವ ಈ ಸಮಯವನ್ನು ಸಹ ತನ್ನ ಉಪಯೋಗಕ್ಕೆ ಬಳಸಿಕೊಳ್ಳಲು ಮುಂದಾದ ಅಮೆಜಾನ್‌ ಸೈಟ್‌ ಮೇಲೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಕ್ರಮಕ್ಕೆ ಮುಂದಾಗಿದೆ. www.amazon.in ನಲ್ಲಿ ‘ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್’ ಹೆಸರಿನಲ್ಲಿ ಸಿಹಿತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಭಕ್ತರಿಗೆ ಮೋಸ ಮಾಡಿದೆ.

ಹೌದು, ಅಯೋಧ್ಯಾ ರಾಮಮಂದಿರದ ಪ್ರಸಾದ (Ayodhya Shri Ram Mandir) ಎಂದು ಲಡ್ಡು ಮಾರಾಟ ಮಾಡುತ್ತಿದ್ದ ಅಮೆಜಾನ್‌ ವಿರುದ್ದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮವನ್ನು ಪ್ರಾರಂಭಿಸಿದೆ. ‘ಶ್ರೀರಾಮ ಮಂದಿರ ಅಯೋಧ್ಯಾ ಪ್ರಸಾದ್’ ನೆಪದಲ್ಲಿ ಅಮೆಜಾನ್ ಮೋಸದ ವ್ಯಾಪಾರ ಮಾಡುತ್ತಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಆರೋಪ ಮಾಡಿತ್ತು, ಇದರ ಆಧಾರದ ಮೇಲೆ ಈ ಕ್ರಮವನ್ನು ಪ್ರಾರಂಭಿಸಲಾಗಿದೆ. ಹಾಗಾದ್ರೆ ಅಮೆಜಾನ್‌ ಅಯೋಧ್ಯಾ ರಾಮ ಮಂದಿರದ ಹೆಸರಿನಲ್ಲಿ ಏನೆಲ್ಲಾ ಮೋಸ ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್ ಹೆಸರಿನಲ್ಲಿ ಸಿಹಿ ತಿಂಡಿಗಳನ್ನು ಮಾರಾಟ ಮಾಡುತ್ತಿದ್ದ ಅಮೆಜಾನ್‌ಗೆ ಇದೀಗ ಕಾನೂನ ಸಂಕಷ್ಟ ಎದುರಾಗಿದೆ. ಜನಪ್ರಿಯ ಇ-ಕಾಮರ್ಸ್‌ ತಾಣವಾಗಿರುವ ಅಯೋಧ್ಯಾ ಪ್ರಸಾದ್‌, ರಘುಪತಿ ತುಪ್ಪದ ಲಡ್ಡು, ಖೋಯಾ ಖೋಬಿ ಲಡ್ಡು ಮುಂತಾದ ಹೆಸರುಗಳಲ್ಲಿ ಪ್ರಸಾದವನ್ನು ಮಾರಟ ಮಾಡಲಾಗುತ್ತಿತ್ತು. ಇದರ ವಿರುದ್ದ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ದೂರು ದಾಖಲಿಸಿದೆ. ಇದೇ ಕಾರಣಕ್ಕೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮಕ್ಕೆ ಮುಂದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಪರಿಶೀಲನೆ ನಡೆಇದ್ದು, ಅಮೆಜಾನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ (www.amazon.in) ನಲ್ಲಿ “ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್” ಎಂದು ಹೇಳಿಕೊಳ್ಳುವ ವಿವಿಧ ಸಿಹಿತಿಂಡಿಗಳು / ಆಹಾರ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿವೆ ಎಂದು CCPA ಹೇಳಿದೆ. ಇದು ಗ್ರಾಹಕರನ್ನು ತಪ್ಪುದಾರಿಗೆ ಎಳೆಯಲಿದ್ದು, ಅಮೆಜಾನ್‌ ಮಾಡಿರುವುದು ಮೋಸದ ವ್ಯಾಪಾರ ಎಂದು ಹೇಳಿದೆ. ಅಲ್ಲದೆ ಸೂಕ್ತ ಉತ್ತರ ನೀಡುವಂತೆ ಅಮೆಜಾನ್‌ಗೆ ನೋಟಿಸ್‌ ಕೂಡ ನೀಡಿದೆ.