Recent Posts

Sunday, January 19, 2025
ರಾಜಕೀಯರಾಷ್ಟ್ರೀಯಸುದ್ದಿ

ಕರ್ತವ್ಯ ಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ, ಫ್ರಾನ್ಸ್ ಪ್ರಧಾನಿ ಮ್ಯಾಕ್ರನ್ ಭಾಗಿ – ಕಹಳೆ ನ್ಯೂಸ್

ನವದೆಹಲಿ: ಜ.26ರ ಗಣರಾಜ್ಯೋತ್ಸವದ ಸಂಭ್ರಮ ದೇಶದೆಲ್ಲೆಡೆ ಕಂಡು ಬರುತ್ತಿದ್ದು, ಇತ್ತ ದೇಶದ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯಪಥದಲ್ಲಿ ತ್ರಿವರ್ಣ ಧ್ವಜವನ್ನು ಧ್ವಜಾರೋಹಣ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಫ್ರಾನ್ಸ್ ಪ್ರಧಾನಿ ಇಮ್ಯಾನುಯೆಲ್ ಮ್ಯಾಕ್ರನ್ ಜೊತೆ ಕರ್ತವ್ಯ ಪಥಕ್ಕೆ ಆಗಮಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಇಬ್ಬರನ್ನು ಸ್ವಾಗತಿಸಿದರು. ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಆರಂಭದಲ್ಲಿ ಸೈನಿಕರಿಂದ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ 21 ಗನ್ ಸೆಲ್ಯೂಟ್ ಕೂಡ ಸಲ್ಲಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ಮಾಡುವ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಫ್ರಾನ್ಸ್ ಪ್ರಧಾನಿ ಇಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಣರಾಜ್ಯೋತ್ಸವದ ಹಿನ್ನೆಲೆ ಇದೇ ಮೊದಲ ಬಾರಿಗೆ 100ಕ್ಕೂ ಹೆಚ್ಚು ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸುವ ಮೂಲಕ ಮೆರವಣಿಗೆಯನ್ನು ನಡೆಸಿದ್ದಾರೆ. ಕಲಾವಿದರು ಶಂಖ, ನಾದಸ್ವರ, ನಾಗರ ಮೊದಲಾದ ಪರಿಕರಗಳನ್ನು ನುಡಿಸುವ ಸಂಗೀತದೊಂದಿಗೆ ಮೆರವಣಿಗೆ ನಡೆಯಲಿದೆ.

ಇದಕ್ಕೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿದ ಪ್ರಧಾನಿ ಮೋದಿ ವೀರಯೋಧರಿಗೆ ನಮನ ಸಲ್ಲಿಸಿದರು. ಗಣರಾಜ್ಯೋತ್ಸವದ ಮುಖ್ಯ ಅತಿಥಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಈ ಬಾರಿಯ ಗಣರಾಜ್ಯೋತ್ಸವ ಸ್ಪೆಷಲ್ ಅಟ್ರ್ಯಾಕ್ಷನ್. ಸುಮಾರು 13,000 ವಿಶೇಷ ಅತಿಥಿಗಳು ‘ ಅಭಿವೃದ್ಧಿ ಹೊಂದಿದ ಭಾರತ’ ಮತ್ತು ‘ಭಾರತ – ಪ್ರಜಾಪ್ರಭುತ್ವದ ತಾಯಿ’ ವಿಷಯಗಳ ಆಧಾರದ ಮೇಲೆ ಈ ವರ್ಷದ ಪರೇಡ್‌ನಲ್ಲಿ ಭಾಗವಹಿಸುತ್ತಿದ್ದಾರೆ.

ಈ ಬಾರಿಯ ಪರೇಡ್‌ನಲ್ಲಿ ಭಾಗವಹಿಸುವ ಆಹ್ವಾನಿತರ ಸುರಕ್ಷತೆಗಾಗಿ ಬಿಗಿ ಭದ್ರತೆಯನ್ನು ಮಾಡಲಾಗಿದೆ. ಇಲ್ಲಿಯವರೆಗೆ ಯಾವಾಗಲೂ ಮಿಲಿಟರಿ ಬ್ಯಾಂಡ್‌ನೊಂದಿಗೆ ಮೆರವಣಿಗೆಯನ್ನು ಪ್ರಾರಂಭಿಸಲಾಗುತ್ತಿತ್ತು. ಆದರೆ ಈ ಬಾರಿ ದೇಶಾದ್ಯಂತದ 100 ಮಹಿಳಾ ಸಾಂಸ್ಕೃತಿಕ ಕಲಾವಿದರು ಸಾಂಪ್ರದಾಯಿಕ ವಾದ್ಯಗಳೊಂದಿಗೆ ಮೆರವಣಿಗೆಯನ್ನು ಪ್ರಾರಂಭಿಸಿದರು.

ಗಣರಾಜ್ಯೋತ್ಸವ ಪರೇಡ್‌ನ ಭದ್ರತೆಯ ಹಿತದೃಷ್ಟಿಯಿಂದ 14,000 ಸಿಬ್ಬಂದಿಯನ್ನು ಕರ್ತವ್ಯ ಪಥದಲ್ಲಿ ಮತ್ತು ಸುತ್ತಮುತ್ತ ನಿಯೋಜಿಸಲಾಗಿದೆ.