Recent Posts

Sunday, January 19, 2025
ಸುದ್ದಿ

“ನನ್ನ ವೈಯಕ್ತಿಕ ಫೋಟೊಗಳನ್ನು ಪೋಸ್ಟ್ ಮಾಡುವ ಹಕ್ಕು ಯಾರಿಗೂ ಇಲ್ಲ.. ಎಚ್ಚರ ಇರಲಿ”; ಪವಿತ್ರಾ ಗೌಡ

ಕೆಲವು ದಿನಗಳ ಹಿಂದಷ್ಟೇ ನಟ ದರ್ಶನ್ ಜೊತೆಗಿನ ಫೋಟೊಗಳನ್ನು ನಟಿ ಪವಿತ್ರಾ ಗೌಡ ಹಂಚಿಕೊಂಡಿದ್ದರು. ಇದೇ ವೇಳೆ ನಮ್ಮಿಬ್ಬರ ರಿಲೇಷನ್‌ಶಿಪ್‌ಗೆ 10 ವರ್ಷ ಎಂದು ಬರೆದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್‌ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.

ಪವಿತ್ರಾ ಗೌಡ ಮೊದಲನೇ ಮದುವೆಯ ಫೋಟೊಗಳನ್ನು ಶೇರ್ ಮಾಡಿದ್ದರು. ಜೊತೆ ಪವಿತ್ರಾಗೌಡ ಅವರ ಪುತ್ರಿ ಖುಷಿಗೌಡ ಮೊದಲನೇ ಪತಿಯ ಮಗಳು ಎಂಬುದನ್ನು ತಮ್ಮ ಪೋಸ್ಟ್‌ನಲ್ಲಿ ವಿಶೇಷವಾಗಿ ಹೇಳಿದ್ದರು. ಈ ಪೋಸ್ಟ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ಅವರ ಪರವಾಗಿ ಕಮೆಂಟ್ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪೋಸ್ಟ್‌ ವಿರುದ್ಧ ಈಗ ಪವಿತ್ರಾ ಗೌಡ ಅಸಮಧಾನ ಹೊರಹಾಕಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ಟ್ಯಾಗ್ ಮಾಡಿ, ಎಚ್ಚರಿಕೆಯ ಸಂದೇಶವನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ತಮ್ಮ ಮೊದಲನೇ ಮದುವೆ, ಮಗಳು, ವಿಚ್ಛೇದನ ಹಾಗೂ ಕಾನೂನು ಕ್ರಮದ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ. ಪವಿತ್ರಾ ಗೌಡ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಏನು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ದರ್ಶನ್ ಮಗಳು ಎಂದು ಎಲ್ಲೂ ಹೇಳಿಲ್ಲ”
“ನಾನು ಪವಿತ್ರ ಗೌಡ.. ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು, ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಲೈಫ್‌ನಲ್ಲಿ ಉಂಟಾದ ಸಮಸ್ಯೆಗಳಿಂದ ನಾನು ಸಂಜಯ್ ಅವರಿಂದ ವಿಚ್ಛೇದನ ಪಡೆದಿದ್ದೇನೆ. ಇಲ್ಲಿಯವರೆಗೂ ಖುಷಿ ಗೌಡ, ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ.” ಎಂದು ವಿಜಯಲಕ್ಷ್ಮಿ ಆರೋಪಕ್ಕೆ ನಟಿ ಪವಿತ್ರಾ ಗೌಡ ಪ್ರತಿಕ್ರಿಯಿಸಿದ್ದಾರೆ.

“10 ವರ್ಷದಿಂದ ಸಂತೋಷವಾಗಿದ್ದೇವೆ”
“ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ. ಇದನ್ನು ನೋಟ್ ಮಾಡಿಕೊಳ್ಳಿ. ನಾನು ಇಲ್ಲಿ ಯಾವುದೇ ವೈಯಕ್ತಿಕ ಕಾರಣ ಹಾಗೂ ಉದ್ದೇಶಗಳಿಗಾಗಿ ಇಲ್ಲ. ಕಳೆದ 10 ವರ್ಷಗಳಿಂದ ಪರಿಶುದ್ಧವಾದ ಪ್ರೀತಿ ಹಾಗೂ ಕಾಳಜಿಯಿಂದ ಇದ್ದೇನೆ. ಇದು ಅಷ್ಟು ಸುಲಭ ಅಲ್ಲವೇ ಅಲ್ಲ. ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ. ಈ ವಿಚಾರವಾಗಿ ವಿಜಯಲಕ್ಷ್ಮಿರವರೇ ನನಗೆ ಹಲವಾರು ಸಾರಿ ಕರೆ ಮಾಡಿ ನನ್ನ ಬಳಿ ಮಾತನಾಡಿದ್ದು, ವಿಜಯಲಕ್ಷ್ಮಿರವರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲವೆಂದು ತಿಳಿಸಿರುತ್ತಾರೆ. (ಅದರ ಕೆಲವು ಸಾಕ್ಷಿಗಳು ಹಾಗೂ ನನ್ನ ವಿಚ್ಛೇದನದ ದಾಖಲೆಗಳನ್ನು ಸಮಯ ಬಂದಾಗ ಹಂಚಿಕೊಳ್ಳುತ್ತೇನೆ).” ಎಂದು ಪವಿತ್ರಾ ಗೌಡ ತಿರುಗೇಟು ನೀಡಿದ್ದಾರೆ.

“ಮಾನಸಿಕ ನೋವುಂಟು ಮಾಡಿದೆ”
“ಇದೀಗ ವಿಜಯಲಕ್ಷ್ಮಿರವರು ನನ್ನ ವಿರುದ್ಧವಾಗಿ ಪೋಸ್ಟ್‌ಗಳನ್ನು ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. ನನ್ನ ಹಾಗೂ ನನ್ನ ಹದಿಹರೆಯದ ಮಗಳಾದ ಖುಷಿ ಗೌಡಳ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಎಂಬ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬಹಳಷ್ಟು ಜನ ಕೆಟ್ಟ ಭಾಷೆಯಿಂದ ನಿಂದಿಸುವುದು ನನಗೆ ಮಾನಸಿಕ ನೋವು ಉಂಟುಮಾಡಿದೆ.” ಎಂದು ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದರ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

“ನನ್ನ ವೈಯಕ್ತಿಕ ಪೋಟೊಗಳನ್ನು ಪೋಸ್ಟ್ ಮಾಡುವ ಹಕ್ಕಿಲ್ಲ”
“ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ ವೈಯಕ್ತಿಕ ಪೋಟೊಗಳನ್ನು ಪೋಸ್ಟ್ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ. ಈ ಮೂಲಕ ನಾನು ಹೇಳುವುದೇನೆಂದರೆ, ನನಗೂ ಕಾನೂನು ಕ್ರಮ ತಗೆದುಕೊಳ್ಳುವ ಹಕ್ಕು ಇದೆ. ಆದರೂ, ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ.. ಕಾರಣ, ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ. ನಾನು ಅವರ ಬಾಳಲ್ಲಿ ಬರುವುದಕ್ಕೂ ಮುನ್ನ ಅವರಿಬ್ಬರ ಬಗ್ಗೆ ಇರುವ ಸಮಸ್ಯೆ ಬಗ್ಗೆ ನಿಮಗೆಲ್ಲರಿಗೂ ಗೊತ್ತು ಎಂದು ಭಾವಿಸಿದ್ದೇನೆ. ಇನ್ನೊಮ್ಮೆ ನೆನಪಿಸಿಕೊಳ್ಳಿ.” ಎಂದು ವಿಜಯಲಕ್ಷ್ಮಿಯವರನ್ನು ಟ್ಯಾಗ್ ಮಾಡಿ ಪವಿತ್ರಾ ಗೌಡ ಪೋಸ್ಟ್ ಮಾಡಿದ್ದಾರೆ.

ಪವಿತ್ರಾ ಗೌಡ ಪೋಸ್ಟ್ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಳೆದೆರಡು ದಿನಗಳಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರಾ ಗೌಡ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಈ ಪೋಸ್ಟ್ ಬಳಿಕ ವಿಜಯಲಕ್ಷ್ಮಿ ದರ್ಶನ್ ಪ್ರತಿಕ್ರಿಯೆ ಹೇಗಿರುತ್ತೆ? ಅನ್ನೋದನ್ನು ಕಾಲವೇ ಉತ್ತರಿಸಲಿದೆ.