32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಧಾನ : ವಂಚಿತರಾದವರಿಗೆ 2 ವರ್ಷದ ಬಳಿಕ ಅವಕಾಶ : ಏನಿದು ಕೈ ನಾಯಕರ ಮಾಸ್ಟರ್ ಪ್ಲಾನ್ – ಕಹಳೆ ನ್ಯೂಸ್
ಕೊನೆಗೂ ನಿಗಮ- ಮಂಡಳಿಗಳ ಅಧ್ಯಕ್ಷರ ನೇಮಕಾತಿಯಾಗಿದ್ದು, 32 ಶಾಸಕರನ್ನ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 9ತಿಂಗಳು ಕಳೆದರೂ ನಿಗಮ ಮಂಡಳಿ ಅಧ್ಯಕ್ಷ ನೇಮಕವಾಗಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಕೊನೆಗೂ ಹೈಕಮಾಂಡ್ ಸೂಚನೆಯ ಮೇರೆಗೆ ಗಣರಾಜ್ಯೋತ್ಸವ ದಿನವಾದ ಇಂದು (ಜ.26) ನಿಗಮ ಮಂಡಳಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಬೆಳಗಾವಿ ಅಧಿವೇಶನಕ್ಕೂ ಮೊದಲೇ ನಿಗಮ- ಮಂಡಳಿಗಳ ಪಟ್ಟಿ ಅಧಿಕೃತವಾಗಿ ಪ್ರಕಟಗೊಳಿಸಲು ಕಾಂಗ್ರೆಸ್ ಪಟ್ಟಯನ್ನ ಸಿದ್ದಪಡಿಸಿತ್ತು. ನಿಗಮ – ಮಂಡಳಿ ಗಾದಿಗಾಗಿ ಕಾಂಗ್ರೆಸ್‌ನಲ್ಲಿ ಸಾಕಷ್ಟು ಪೈಪೋಟಿ ನಡೆದಿದ್ದು, ಸಚಿವ ಸ್ಥಾನದಿಂದ ವಂಚಿತರಾದವರಿಗೆ ನಿಗಮ –ಮಂಡಳಿಯಲ್ಲಿ ಸ್ಥಾನ ನೀಡಬೇಕು ಎಂಬ ಚರ್ಚೆಗಳು ಜೋರಾಗಿಯೇ ನಡೆದಿತ್ತು. ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರನ್ನೂ ಸಮಾಧಾನ ಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಿಗಮ-ಮಂಡಳಿ ಅಧ್ಯಕ್ಷ ಸ್ಧಾನಕ್ಕೆ 32 ಶಾಸಕರನ್ನ ಆಯ್ಕೆ ಮಾಡಿದೆ.
ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ:
ಹಂಪನಗೌಡ ಬಾದರ್ಲಿ – ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ
ಅಪ್ಪಾಜಿ ಸಿ.ಎಸ್.ನಾಡಗೌಡ – ಕೆಎಸ್‌ಡಿಎಲ್
ರಾಜು ಕಾಗೆ – ಹುಬ್ಬಳ್ಳಿ ಸಾರಿಗೆ ನಿಗಮ (ವಾಯವ್ಯ ಸಾರಿಗೆ ನಿಗಮ)
ಹೆಚ್.ವೈ.ಮೇಟಿ – ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ
ಎಸ್.ಆರ್.ಶ್ರೀನಿವಾಸ – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ಬಸವರಾಜ ನೀಲಪ್ಪ ಶಿವಣ್ಣನವರ್ – ಅರಣ್ಯ ಅಭಿವೃದ್ಧಿ ನಿಗಮ
ಬಿ.ಜಿ.ಗೋವಿಂದಪ್ಪ – ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ಹೆಚ್.ಸಿ.ಬಾಲಕೃಷ್ಣ – ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
ಜಿ.ಎಸ್.ಪಾಟೀಲ್: ಖನಿಜ ಅಭಿವೃದ್ಧಿ ನಿಗಮ ನಿಯಮಿತ
ಎನ್.ಎ.ಹ್ಯಾರಿಸ್ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಕೌಜಲಗಿ ಮಹಾಂತೇಶ್ ಶಿವಾನಂದ – ಹಣಕಾಸು ಸಂಸ್ಥೆ
ಸಿ.ಪುಟ್ಟರAಗಶೆಟ್ಟಿ – ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್
ಬೀಳಗಿ ಶಾಸಕ ಜೆ.ಟಿ.ಪಾಟೀಲ್ – ಹಟ್ಟಿ ಚಿನ್ನದ ಗಣಿ
ರಾಜಾ ವೆಂಕಟಪ್ಪ ನಾಯಕ – ಕರ್ನಾಟಕ ರಾಜ್ಯ ಉಗ್ರಾಣ ನಿಗಮ
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ – ಲ್ಯಾಂಡ್ ಆರ್ಮಿ
ಕೆ.ಎಂ.ಶಿವಲಿAಗೇಗೌಡ – ಕರ್ನಾಟಕ ಗೃಹ ಮಂಡಳಿ
ಅಬ್ಬಯ್ಯ ಪ್ರಸಾದ್ – ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿ
ಬೇಳೂರು ಗೋಪಾಲಕೃಷ್ಣ- ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ
ಎಸ್.ಎನ್.ನಾರಾಯಣಸ್ವಾಮಿ – ಕೆಯುಡಿಐಸಿ ಮತ್ತು ಎಫ್‌ಸಿ
ಪಿ.ಎಂ.ನರೇAದ್ರಸ್ವಾಮಿ – ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಟಿ.ರಘುಮೂರ್ತಿ – ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ
ರಮೇಶ್ ಬಾಬು ಬಂಡಿಸಿದ್ದೇಗೌಡ – ಚೆಸ್ಕಾಂ
ಬಿ.ಶಿವಣ್ಣ – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಎಸ್.ಎನ್.ಸುಬ್ಬಾರೆಡ್ಡಿ – ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ
ವಿನಯ ಕುಲಕರ್ಣಿ – ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು – ಜಂಗಲ್ ಲಾಡ್ಜಸ್
ಬಸನಗೌಡ ದದ್ದಲ್ – ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
ಖನೀಜ್ ಫಾತಿಮಾ – ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ
ವಿಜಯಾನಂದ ಕಾಶಪ್ಪನರ್ – ಕರ್ನಾಟಕ ಕ್ರೀಡಾ ಪ್ರಾಧಿಕಾರ
ಶ್ರೀನಿವಾಸ ಮಾನೆ – ಡಿಸಿಎಂ ರಾಜಕೀಯ ಸಲಹೆಗಾರ
ಟಿ.ಡಿ.ರಾಜೇಗೌಡ – ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ
ಎಂ.ರೂಪಕಲಾ – ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ
ವಂಚಿತರಾದವರಿಗೆ 2 ವರ್ಷದ ಬಳಿಕ ಅವಕಾಶ
ಈಗ ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ಅಧಿಕಾರದ ಅವಧಿ 2 ವರ್ಷ ಎಂದು ಉಲ್ಲೇಖ ಮಾಡಲಾಗಿದೆ. ಏಕೆಂದರೆ ಕಾಂಗ್ರೆಸ್‌ನಲ್ಲಿ ಇನ್ನೂ ಅನೇಕ ಆಕಾಂಕ್ಷಿಗಳು ಇದ್ದು, ಅವರೆಲ್ಲರಿಗೂ 2 ವರ್ಷದ ಬಳಿಕ ಅವಕಾಶವನ್ನು ನೀಡಲಾಗುವುದು ಎಂದು ಭರವಸೆಯನ್ನು ನೀಡಲಾಗಿದೆ. ಅದಕ್ಕಾಗಿಯೇ ಈಗ ಹೊರಡಿಸಿರುವ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದ್ದು, ಆಕಾಂಕ್ಷಿತರೆಲ್ಲರೂ 2 ವರ್ಷದ ನಂತರ ತಮಗೆ ಸಿಗಬಹುದು ಎಂದು ನಿರೀಕ್ಷೆ ಇಟ್ಟು ಕೊಳ್ಳುವಂತಾಗಿದೆ.