Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿದ ಮಾಣಿ ಬಾಲವಿಕಾಸ ಶಾಲಾ ಬಾಲಕಿ – ಕಹಳೆ ನ್ಯೂಸ್

ಬಂಟ್ವಾಳ: ಮಾಣಿ ಬಾಲವಿಕಾಸ ಅಂಗ್ಲಮಾಧ್ಯಮ ಶಾಲೆಯ 4ನೇ ಕ್ಲಾಸಿನ ವಿದ್ಯಾರ್ಥಿನಿ ತನ್ನ ಕೇಶರಾಶಿಯನ್ನು ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿದ್ದು, ಬಾಲಕಿಯ ದಾನವನ್ನು ಕಡೇಶಿವಾಲಯದ ಯುವ ಶಕ್ತಿ ಸೇವಾ ಪಥ ಸಂಘಟನೆ ಕೊಂಡಾಡಿದ್ದಾರೆ..

10 ವರ್ಷದ ಬಾಲಕಿ ಸ್ತುತಿ ಗಂಗಾಧರ್ ಬಿಸಿರೋಡಿನ ನಗರ ಪೋಲೀಸ್ ಠಾಣೆಯ ಧನ್ಯಶ್ರೀ ಪೋಲಿಸ್ ಕಾನ್ಸ್ ಟೇಬಲ್ ಅವರ ಪುತ್ರಿಯಾಗಿದ್ದು, ತಾಯಿ ಧನ್ಯಶ್ರೀ ಅವರ ಮನಸ್ಸಿನ ಯೋಚನೆಗೆ ಮಗಳು ಸಾಥ್ ನೀಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ಸುಂದರವಾದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದಾನ ಮಾಡಿದ್ದಾರೆ. ಎಳೆಯ ಮಗುವಿನ ಮನಸ್ಸಿಗೆ ದಾನ ಮಾಡುವ ಉತ್ತಮ ಗುಣದ ಬಗ್ಗೆ ತಾಯಿ ಪ್ರೇರಣೆ ನೀಡಿದ್ದಾರೆ.