Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಆಶ್ರಯದಲ್ಲಿ ಫೆ.03 ಮತ್ತು 04ರಂದು ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗ ಇದರ ನೇತೃತ್ವದಲ್ಲಿ ಸಂಪ್ಯದಲ್ಲೊAದು ಗೋಜಾತ್ರೆ – ಕಹಳೆ ನ್ಯೂಸ್

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಆಶ್ರಯದಲ್ಲಿ ಫೆ.03 ಮತ್ತು 04ರಂದು ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗ ಇದರ ನೇತೃತ್ವದಲ್ಲಿ ಸಂಪ್ಯದಲ್ಲೊoದು ಗೋಜಾತ್ರೆ “ಗೋಲೋಕೋತ್ಸವ”ವು ಮೊಟ್ಟೆತ್ತಡ್ಕ ಎನ್ ಅರ್ ಸಿಸಿ ಬಳಿ ಕುರಿಯ ಗ್ರಾಮದ ಸಂಪ್ಯದಮೂಲೆಯಲ್ಲಿರುವ ಶ್ರೀದೇವಳದ ಗೋವಿಹಾರ ಧಾಮದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಉಡುಪಿ ಅಧಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು, ಗೋಕರ್ಣ ಸಂಸ್ಥಾನ ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿ, ಶ್ರೀ ಕ್ಷೇತ್ರ ಮಾಣಿಲದ ಕರ್ಮಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಗುರುದೇವದತ್ತ ಕ್ಷೇತ್ರ ಒಡಿಯೂರು ಮಠದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದಿವ್ಯ ಉಪಸ್ಥಿತಿ ಹಾಗೂ ಆರ್ಶೀವಚನ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಡಾ. ವಿದ್ಯಾಭೂಷಣ ಬೆಂಗಳೂರು ಇವರಿಂದ ಭಕ್ತಿ ಭಾವ ಲಹರಿ ಹಾಗೂ ವಿದುಷಿ ಮಂಜುಳ ಸುಬ್ರಹ್ಮಣ್ಯ ನಾಟ್ಯರಂಗ ಪುತ್ತೂರು ಇವರಿಂದ ಧರ್ಮ ಧೇನು ನೃತ್ಯ ರೂಪಕ ನಡೆಯಲಿದ್ದು, ಗೋವಿನ ಉತ್ಪನ್ನಗಳು, ಫುಡ್ ಕೋರ್ಟ್, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಶೇಷ ಆಕರ್ಷಣೆಯ ಕುದುರೆ ಸವಾರಿ ನಡೆಯಲಿದೆ. ಹೈನುಗಾರರಿಂದ ರಾಸುಗಳು ಮತ್ತು ಗೋಪ್ರೇಮಿಗಳಿಂದ ದೇಸೀ ತಳಿಯ ಗೋವುಗಳ ಪ್ರದರ್ಶನಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು