Monday, January 20, 2025
ಸುದ್ದಿ

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಂಭ್ರಮದ ಗಣರಾಜ್ಯೋತ್ಸವ

 

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂದು 75ನೇ ಗಣರಾಜ್ಯೋತ್ಸವವನ್ನು ಶ್ರದ್ಧೆ ಮತ್ತು ಸಂಭ್ರಮದಿAದಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟೊನಿ ಪ್ರಕಾಶ್
ಮೊಂತೆರೋರವರು ಧ್ವಜಾರೋಹಣ ನಡೆಸಿದರು. ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು “ಇಂದು ನಮ್ಮ ಸಂವಿಧಾನವುಅAಗೀಕಾರವಾದ ದಿನವಾಗಿದೆ. ಭಾರತದ ಸಂವಿಧಾನವು ನಮ್ಮ ನಾಯಕರ ದೂರದರ್ಶಿತ್ವದ ಅಮೂಲ್ಯ ಕೊಡುಗೆಯಾಗಿದೆ. ಈ ದಿನ ನಾವುಸಮಾಜಕ್ಕೆ ಸಕಾರತ್ಮಕವಾಗಿ ಕೊಡುಗೆ ನೀಡುವ ನಮ್ಮ ಪ್ರತಿಜ್ಷೆಯನ್ನು ನವೀಕರಿಸೋಣ. ವಿದ್ಯಾರ್ಥಿಗಳಿಗೆ ಈ ರಾಷ್ಟ್ರದ ಭವಿಷ್ಯವನ್ನುರೂಪಿಸುವ ಗುರುತರವಾದ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಮುನ್ನಡೆಯುವಾಗ ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳನ್ನುಎತ್ತಿ ಹಿಡಿಯೋಣ. ದೇಶದ ಪ್ರಗತಿಗೆ ನಮ್ಮಿಂದಾದ ಕೊಡುಗೆ ನೀಡೋಣ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂತಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ| ಅಶೋಕ್ ರಯಾನ್ ಕ್ರಾಸ್ತಾರವರು ಮಾತನಾಡಿ “75ನೇಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಾವು ನಮ್ಮ ರಾಷ್ಟ್ರವನ್ನು ವ್ಯಾಖ್ಯಾನಿಸುವ ಮೌಲ್ಯಗಳಾದ ಏಕತೆ,ವೈವಿಧ್ಯತೆ ಮತ್ತು ಪ್ರಗತಿಯನ್ನು ಪ್ರತಿಬಿಂಬಿಸೋಣ.. ಯುವಕರು ಭಾರತದ ಭವಿಷ್ಯದ ವಾಸ್ತುಶಿಲ್ಪಿಗಳು. ಆದ್ದರಿಂದ, ಶ್ರೇಷ್ಠತೆಗಾಗಿಶ್ರಮಿಸಿ, ಜ್ಞಾನವನ್ನು ಅಳವಡಿಸಿಕೊಳ್ಳಿ ಮತ್ತು ನಮ್ಮ ಮಹಾನ್ ರಾಷ್ಟ್ರಕ್ಕೆ ಕೊಡುಗೆ ನೀಡಿ” ಎಂದು ಹೇಳಿದರು. ಕಾಲೇಜಿನ ಪ್ರದರ್ಶನಕಲಾಘಟಕದ ವಿದ್ಯಾರ್ಥಿಗಳು ದೇಶಭಕ್ತಿಗೀತೆ ಹಾಡುವ ಮೂಲಕ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಇನ್ನಷ್ಟು ಮೆರುಗುನೀಡಿದರು. ಕಾಲೇಜಿನಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಗಳು, ಎನ್ ಸಿ ಸಿ ಕೆಡೆಟ್ ಗಳು, ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಸಂಭಭ್ರಮಾಚರಣೆಯಲ್ಲಿಪಾಲ್ಗೊAಡರು. ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ ಕಾರ್ಯಕ್ರಮವನ್ನುನಿರೂಪಿಸಿದರು. ಕಾಲೇಜಿನ ಎನ್ ಸಿ ಸಿ ಆರ್ಮಿ ವಿಂಗ್ ನ ಅಧಿಕಾರಿಯಾದ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೇರಾ ಹಾಗೂ ನೇವಿವಿಂಗ್ ನ ಅಧಿಕಾರಿಯಾದ ತೇಜಸ್ವಿ ಭಟ್ ಇವರು ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಹಕಾರ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು