Sunday, January 19, 2025
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರು, ರಂಗ ಕಲಾವಿದ ಕರಿಂಕ ಸುರೇಶ್ ಶೆಟ್ಟಿ ನಿಧನ – ಕಹಳೆ ನ್ಯೂಸ್

ಬಂಟ್ವಾಳ : ಅನಂತಾಡಿ ಗ್ರಾಮದ ಕರಿಂಕ ದಿ. ಸಂಕಪ್ಪ ಶೆಟ್ಟಿಯವರ ಪುತ್ರ ಸುರೇಶ್ ಶೆಟ್ಟಿ (56 ವ.) ಇವರು ಅಲ್ಪಕಾಲದ ಅಸೌಖ್ಯದಿಂದಾಗಿ ಜನವರಿ 23ರಂದು ಸ್ವಗೃಹದಲ್ಲಿ ನಿಧನರಾದರು. ಪುತ್ತೂರಿನ ಶಿಕ್ಷಣ ಕಚೇರಿಯಲ್ಲಿ ಅಧಿಕಾರಿಯಾಗಿದ್ದು, ಬನ್ನೂರಿನಲ್ಲಿ ವಾಸ್ತವ್ಯವಿದ್ದ ಇವರು ಕಳೆದ ಕೆಲ ಸಮಯಗಳ ಹಿಂದೆ ಅಸೌಖ್ಯದಿಂದಾಗಿ ಚಿಕಿತ್ಸೆಯಲ್ಲಿದ್ದರು. ಸುರೇಶ್ ಶೆಟ್ಟಿಯವರು ಕಲಾವಿದರಾಗಿದ್ದು ಯಕ್ಷಗಾನ, ನಾಟಕ, ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಸಹೋದರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು