Recent Posts

Sunday, January 19, 2025
ಸುದ್ದಿ

31ನೇ ಯ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದೊಂದಿಗೆ ಶ್ರೀ ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ, ಮಾತೃಛಾಯಾ ಶಿಕ್ಷಣ ಸಂಸ್ಥೆ ಸೇಡಂ, ಕಲಬುರಗಿ ಜಿಲ್ಲೆ ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಇವರು ದಿನಾಂಕ 20-01-2024 ರಿಂದ 23-01-2024 ರವರೆಗೆ ಆಯೋಜಿಸಿರುವ 31ನೇ ಯ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ (National Children’s Science Congress) ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ 2 ತಂಡಗಳು ಭಾಗವಹಿಸಿದ್ದು ಸೀನಿಯರ್ ವಿಭಾಗದಲ್ಲಿ ಅಭಿನವ್ ಆಚಾರ್ ಕೆ , 9ನೇ ತರಗತಿ (ಶ್ರೀ ಪ್ರಶಾಂತ್ ಆಚಾರ್ ಹಾಗೂ ಶ್ರುತಿ ಎಸ್ ರಾವ್ ದಂಪತಿಗಳ ಪುತ್ರ) ಹಾಗೂ ಶ್ರೀಜಿತ್ ಸಿ.ಎಚ್ , 9ನೇ ತರಗತಿ (ಶ್ರೀ ಗಣೇಶ್ ಭಟ್ ಸಿ. ಎಚ್ ಹಾಗೂ ರವಿಕಲಾ ದಂಪತಿಗಳ ಪುತ್ರ) ಅವರ ತಂಡ “Areca Fibre briquettes as alternate source of energy”ಎಂಬ ಶೀರ್ಷಿಕೆಯಡಿ ವಿಜ್ಞಾನ ಯೋಜನೆ ಮಂಡಿಸಿರುತ್ತಾರೆ. ಜೂನಿಯರ್ ವಿಭಾಗದಲ್ಲಿ ಸುಪ್ರಜಾ ರಾವ್, 8ನೇ ತರಗತಿ (ಶ್ರೀ ಪ್ರಶಾಂತ್ ರಾವ್ ಹಾಗೂ ಸುಮನಾ ದಂಪತಿಗಳ ಪುತ್ರಿ) ಹಾಗೂ ಸಾನ್ವಿ ಎಸ್ ಪ್ರಭು, 8ನೇ ತರಗತಿ (ಶ್ರೀ ಸಂತೋಷ್ ಕುಮಾರ್ ಎ ಹಾಗೂ ಸವಿತಾ ಕೆ ದಂಪತಿಗಳ ಪುತ್ರಿ) ಅವರ ತಂಡ “Narikela the healing” ಎಂಬ ಶೀರ್ಷಿಕೆಯಡಿ ವಿಜ್ಞಾನ ಯೋಜನೆ ಮಂಡಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಈ ವಿದ್ಯಾರ್ಥಿಗಳ ತಂಡ ಬಾಲ ವಿಜ್ಞಾನಿ ಸ್ಪರ್ಧೆಯಲ್ಲಿಯೂ ಭಾಗವಹಿಸಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು