Recent Posts

Monday, January 20, 2025
ಸುದ್ದಿ

ಜೈನ್ ಮೆಡಿಕಲ್ ಸೆಂಟರ್ ನಲ್ಲಿ ರಕ್ತದಾನ ಹಾಗೂ ಕೂದಲುದಾನ ಶಿಬಿರ – ಕಹಳೆ ನ್ಯೂಸ್

ಭಾರತೀಯ ಕಥೋಲಿಕ್ ಯುವ ಸಂಚಾಲನ್ ಮೂಡುಬಿದಿರೆ ಘಟಕ ಇದರ ಸುವರ್ಣ ಮಹೋತ್ಸವದ ಅಂಗವಾಗಿ ರೋಟರಿ ಕ್ಲಬ್ಆಫ್ ಮೂಡಬಿದಿರೆ ಟೆಂಪಲ್ ಟೌನ್, ಜೈನ್ ಮೆಡಿಕಲ್ ಸೆಂಟರ್ ಹಾಗೂ ಫಾದರ್ ಮುಲ್ಲರ್ ಬ್ಲಡ್ ಬ್ಯಾಂಕ್ ಇದರಸಹಯೋಗದೊಂದಿಗೆ 26 ಜನವರಿ 2024 ರಂದು ದಿವಂಗತ ಗ್ರೇಶನ್ ರೋಡ್ರಿಗಸ್ ಇವರ ಸವಿನೆನಪಿಗಾಗಿ ರಕ್ತದಾನ ಮತ್ತುಕೂದಲುದಾನ ಶಿಬಿರವನ್ನು ಜೈನ್ ಮೆಡಿಕಲ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರ್ಪುಸ್ ಕ್ರಿಸ್ತಿ ಚರ್ಚ್ ಇದರ ಧರ್ಮಗುರುಗಳು ವಂದನೀಯ ಒನಿಲ್ ಡಿಸೋಜ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ರೊ. ರೋಬರ್ಟ್ ರೊನಾಲ್ಡ್ ಫೆರ್ನಾಂಡಿಸ್, ಅಧ್ಯಕ್ಷರು ರೋಟರಿ ಕ್ಲಬ್ ಆಫ್ ಮೂಡಬಿದಿರೆ ಟೆಂಪಲ್ ಟೌನ್; ಡಾ. ಮಹಾವೀರಜೈನ್ ವ್ಯವಸ್ಥಾಪಕ ನಿರ್ದೇಶಕರು ಜೈನ್ ಮೆಡಿಕಲ್ ಸೆಂಟರ್; ಶ್ರೀ ವಿನ್ಸೆಂಟ್ ಮಸ್ಕರೇನಸ್, ಸುವರ್ಣ ಮಹೋತ್ಸವ ಸಮಿತಿಯಸಂಚಾಲಕರು; ದಿವಂಗತ ಗ್ರೇಶನ್ ರೋಡ್ರಿಗಸ್ ಇವರ ತಂದೆ ಶ್ರೀ ಲಿಯೋ ರೋಡ್ರಿಗಸ್ ಮತ್ತು ಶ್ರೀ ರೂಬನ್ ಸೆರಾವೊ ಅಧ್ಯಕ್ಷರುಭಾರತೀಯ ಕಥೋಲಿಕ್ ಯುವ ಸಂಚಾಲನ ಮೂಡುಬಿದಿರೆ ಘಟಕ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
62 ದಾನಿಗಳು ರಕ್ತದಾನ ಹಾಗೂ 15 ದಾನಿಗಳು ತಮ್ಮ ಕೂದಲು ದಾನ ಮಾಡಿದರು.