ಬಲ್ನಾಡಿನ ಕಾಡ್ಲ ವೈಕುಂಠಪುರದ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನದಲ್ಲಿ ಫೆ.01 ರಿಂದ ಫೆ 04ರವರೆಗೆ ದೈವಗಳ ನೇಮೋತ್ಸವ ಮತ್ತು ಒತ್ತೆಕೋಲ – ಕಹಳೆ ನ್ಯೂಸ್
ಪುತ್ತೂರು : ಬಲ್ನಾಡಿನ ಕಾಡ್ಲ ವೈಕುಂಠಪುರದ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನದಲ್ಲಿ ಫೆ.01 ರಿಂದ ಫೆ 04ರವರೆಗೆ ಪೆಲಡ್ಡತ್ತಾಯ ಭಂಡಾರಿ ಮತ್ತು ಶ್ರೀ ಧೂಮವತಿ ಕುಪ್ಪೆಟ್ಟು ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ಮತ್ತು ಒತ್ತೆಕೋಲ ನಡೆಯಲಿದೆ.
ಫೆ.01ರಂದು ಬೆಳಗ್ಗೆ ಗಣಪತಿ ಹವನ, ನಾಗದೇವರು ರಕ್ತೇಶ್ವರಿ ಗುಳಿಗ ರಕ್ಷಸ್ ಸಾನಿಧ್ಯದಲ್ಲಿ ತಂಬಿಲ ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಫೆ 02ರಂದು ಸಂಜೆ ಧೂಮವತಿ, ಪೆಲಡ್ಕತ್ತಾಯ ಭಂಡಾರಿ, ಕುಪ್ಪೆಟ್ಟು ಪಂಜುರ್ಲಿ ದೈವಗಳ ಭಂಡಾರ ಇಳಿಸಿ, ರಾತ್ರಿ ಪುದಕ್ಕೋಲ ನಡೆಯಲಿದೆ. ಬಳಿಕ ಅನ್ನ ಸಂತರ್ಪಣೆ ನಡೆದು, ರಾತ್ರಿ 9.30ರಿಂದ ಕುಪ್ಪೆಟ್ಟು ಪಂಜುರ್ಲಿ ದೈವದ ಕೋಲ ಹಾಗೂ ಪೆಲಡ್ಕತ್ತಾಯ ಭಂಡಾರಿ ದೈವದ ಕೋಲ ನಡೆಯಲಿದೆ.
ಫೆ.03ರಂದು ಬೆಳಿಗ್ಗೆ ಧೂಮವತಿ ದೈವದ ನೇಮ ನಡೆದು, ಸಂಜೆ 6ಗಂಟೆಗೆ ಒತ್ತೆಕೋಲದ ಕರ್ಮಿಗಳಿಗೆ ಎಣ್ಣೆಬೂಳ್ಯ ಕೊಡಲಾಗುವುದು. ರಾತ್ರಿ 7.00ಗಂಟೆಗೆ ವಿಷ್ಣುಮೂರ್ತಿ ದೈವದ ಭಂಡಾರ ಇಳಿಸಿ, 7.30ಕ್ಕೆ ತೊಡಂಗೈಲ್, ಮೇಲೇರಿಗೆ ಅಗ್ನಿ ಸ್ಪರ್ಶ ನೀಡಲಾಗುತ್ತದೆ.
ರಾತ್ರಿ 8.000ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಬಳಿಕ ಸಾಜ ಶಾಲಾ ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11ರಿಂದ ಕುಲ್ಚಾಟ ಹಾಗೂ ರಾತ್ರಿ 1.00ಗಂಟೆಗೆ ಊರನ ಪ್ರಸಿದ್ಧ ಕಲಾವಿದರಿಂದ ವೀರಮಣಿ ಕಾಳಗ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಬೆಳಿಗ್ಗೆ 4.00ಗಂಟೆಯಿAದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಹಾಗೂ ಅಗ್ನಿಸೇವೆ ನಡೆಯಲಿದೆ. ಫೆ.04ರಂದು ಬೆಳಿಗ್ಗೆ ಮಾರಿಕಲ, ಅರಶಿನ ಪ್ರಸಾದ ಹಾಗೂ 9.00 ಗಂಟೆಗೆ ಗುಳಿಗ ದೈವದ ಕೋಲ ನಡೆಯಲಿದೆ.