Friday, January 24, 2025
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳದ ಅಮ್ಟಾಡಿ‌ಯಲ್ಲಿ ಕಸಕಡ್ಡಿಗೆ ಹಾಕಿದ್ದ ಬೆಂಕಿಗೆ ಸಿಲುಕಿ ಹಿರಿಯ ದಂಪತಿ ಸಾವು – ಕಹಳೆ ನ್ಯೂಸ್

ಮಂಗಳೂರು: ಕಸಕಡ್ಡಿಗೆ ಹಾಕಿದ್ದ ಬೆಂಕಿಗೆ ಸಿಲುಕಿ ದಂಪತಿಗಳು‌ (Couple) ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳದ (Bantwal) ಅಮ್ಟಾಡಿ‌ ಬಳಿಯ ತುಂಡು ಪದವು ಎಂಬಲ್ಲಿ ನಡೆದಿದೆ. ತುಂಡುಪದವು‌ ನಿವಾಸಿ ದಂಪತಿಗಳಾದ ಗಿಲ್ಬರ್ಟ್ ಕಾರ್ಲೋ(78) ಪತ್ನಿ ಕ್ರಿಸ್ಟಿನಾ ಕಾರ್ಲೋ(70) ಮೃತ ದುರ್ದೈವಿಗಳು.

ಮೃತ ದಂಪತಿ ಮನೆ ಪಕ್ಕದ ಕಸ ಕಡ್ಡಿಗೆ ಬೆಂಕಿ‌ (Fire Accident) ಹಾಕಿದ್ದರಂತೆ. ಈ ವೇಳೆ ಗಾಳಿಗೆ ಬೆಂಕಿ ಹರಡಿಕೊಂಡು ಮನೆ ಪಕ್ಕದ ಕಾಡಿಗೂ ವ್ಯಾಪಿಸಿದೆ. ಇದರಿಂದ ಆತಂಕಗೊಂಡ ದಂಪತಿ ಕಾಡಿಗೆ (Forest) ವ್ಯಾಪಿಸಿದ ಬೆಂಕಿಯನ್ನು ನಂದಿಸಲು ಮುಂದಾಗಿದ್ದಾರೆ. ದುರದೃಷ್ಟವಶಾತ್ ಈ ವೇಳೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕಾಡಿನಲ್ಲೇ ದಂಪತಿ ಸುಟ್ಟು ಕರಕಲಾಗಿದ್ದಾರೆ. ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ (Bantwal Rural Police Station) ಪ್ರಕರಣ ದಾಖಲು ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಟಾಕಿ ಗೋಡೌನ್ ಬ್ಲಾಸ್ಟ್‌, ಮೂವರು ಸಾವನ್ನಪ್ಪಿರುವ ಶಂಕೆ

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ಪಟಾಕಿ ಗೋಡೌನ್ ಬ್ಲಾಸ್ಟ್‌ ಆಗಿ ಮೂವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬಶೀರ್ ಎಂಬವರ ಜಾಗದಲ್ಲಿ ಘಟನೆ ನಡೆದಿದ್ದು, ಸಾಲಿಡ್ ಫೈರ್ ವರ್ಕ್ ಎಂಬ ಹೆಸರಿನ ಗೋಡೌನ್​ನಲ್ಲಿ ದುರ್ಘಟನೆ ನಡೆದಿದೆ. ಸ್ಥಳಕ್ಕೆ ವೇಣೂರು ಪೊಲೀಸರು ದೌಡಾಯಿಸಿದ್ದು, 55 ವರ್ಷದ ಸ್ವಾಮಿ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಭೀಕರ ಅಪಘಾತದಲ್ಲಿ ಓರ್ವ ಸಾವು, ಮತ್ತೋರ್ವನ ಕಾಲು ಕಟ್​

ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತ ಸಂಭವಿಸಿ ಓರ್ವ ಸಾವು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ತಿಮ್ಲಾಪುರ ಬಳಿ ನಡೆದಿದೆ. 42 ವರ್ಷದ ಸೋಮ ಶೇಖರ್ ಮೃತ ದುರ್ದೈವಿಯಾಗಿದ್ದಾರೆ. ಇನ್ನು ಘಟನೆಯಲ್ಲಿ ಉಮೇಶ್ ಎನ್ನುವರಿಗೆ ಕಾಲು‌ ಮುರಿತವಾಗಿದೆ. ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.