Monday, November 25, 2024
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೩

 

” ಮಾನಸ ಸೌರಭ “

 

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನಸ ಮಂದಾರ ನವವಿಧ ಶೃಂಗಾರ ಬದುಕಿದು
ಅತಿಸುಂದರ l
ತಾಮಸವಲ್ಲದ ಸಾಹಸ ಜೀವನ ಧನಕನಕ ವಲ್ಲದ ಬಂಗಾರ ll
ಬದುಕಿನ ಬವಣೆಯ ಸಾಗಿಸಲೇಸುಗ ರಾಗರಾಣಿಯ ತಿಳಿನಾದ l
ನಸುನಗೆ ಬೀರುವ ನವಪ್ರತಿಬಿಂಬ ಮಾಡುವ ಆ ಶಶಿ ಮುಖದಿಂದ l

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಗಿರಿದ ಮನಕೆ ಅರಳಿದ ಸುಮಕೆ ಸೂರ್ಯನ ರಶ್ಮಿಯ
ಸವಿಲೇಪನ l
ಮರುಗಿದ ಜೀವಕೆ ಕರುಣದ ಭಾವಕ್ಕೆ ಗುರುಸನ್ನಿಧಿಯೇ ಕವಿಚೇತನ l
ಮಾನವ ಜೀವನ ದೇವನ ಪಾವನ ಪಡೆಯುವ ಸುಮಧುರ ನಂದನ
ರಾಮನ ಗುಣಗಳ ಪಾವನ ನುಡಿಗಳ ಪಾಲಿಸೆ ಈ ಜಗ ವನ ನಂದನ ll
ಥರಥರ ಸೌರಭವನು ಹೊರಸೂಸುವ ಮಕರಂದದೊಳು ಅರವಿಂದ l
ಹೃದಯಂಗಳದಲ್ಲಿ ಮೂಡುವ ಚಂದಿರ ಮಂದಿರದೊಳಗಿಹ ಗೋವಿಂದ l
ನಗೆಬೆಳಂದಿಗಳ ಹೂಮಳೆ ಪರಿಮಳ ಚದುರಿದ ಕಸ್ತೂರಿ ಹಿತದಿಂದ l
ಗುರುಪದ ಚರಣಕೆ ಎರಗುತ ಧರೆಯೊಳು ಪಾವನರಾಗುವ ಮುದಂದಿದ
ಮಂಜಿನ ಮಲ್ಲಿಗೆ ಮುತ್ತಿನ ತೆರದಿ ಹೊಳೆಹೊಳೆಯುತಿದೆ ತಾ ನೋಡ l
ಮೊಸರಿನ ಗಡಿಗೆ ಒಡೆಯಿತೊ ಎದುರೇ ಬಾನಂಗಳದಾ ಈ ತಿಳಿಮೋಡ ll
ನಂದನವನಾದ ಗೋಪಗೋಪಿಯರ ನವರಸ ನಾಟಕ ಹೊಂಗಿರಣ l
ಅರುಣೋದಯದಾ ಹೊನ್ನ ಶರಧಿಯೊಳು ಜಗಮಗಿಸಿದೆ ತಾ ಪೂರ್ಣ ll

Leave a Response