Wednesday, January 22, 2025
ಸುದ್ದಿ

ಉಡುಪಿ : ಕಟ್ಪಾಡಿ ರೋಟರಿ ಕ್ಲಬ್ ಮತ್ತು ಸರಕಾರಿ ಜಿಲ್ಲಾ ಆಸ್ಪತ್ರೆ, ಸಹಯೋಗದೊಂದಿಗೆ ತಾಯಿಯಿಂದ ಮಗುವಿಗೆ ಹೆಚ್. ಐ ವಿ ಮತ್ತು ಹೆಪಟೈಟಿಸ್ ಹರಡುವಿಕೆಯ ನಿರ್ಮೂಲನ ಆಂದೋಲನ ಕಾರ್ಯಕ್ರಮ – ಕಹಳೆ ನ್ಯೂಸ್

ಉಡುಪಿ : ಕಟ್ಪಾಡಿ ರೋಟರಿ ಕ್ಲಬ್ ಮತ್ತು ಸರಕಾರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ, ಉಡುಪಿ ಇವರ ಜಂಟಿ ಸಹಯೋಗದೊಂದಿಗೆ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉಡುಪಿಯ ಸಭಾಂಗಣದಲ್ಲಿ ತಾಯಿಯಿಂದ ಮಗುವಿಗೆ ಹೆಚ್. ಐ ವಿ ಮತ್ತು ಹೆಪಟೈಟಿಸ್ ಹರಡುವಿಕೆಯ ನಿರ್ಮೂಲ ನಿಗಾಗಿ ಆಂದೋಲನ ಕಾರ್ಯಕ್ರಮ 25ರಂದು ಜರಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಡಾಕ್ಟರ್ ವೀಣಾ ಕುಮಾರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು.,ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕ್ಷಯ ರೋಗ ಮತ್ತು ಎಚ್ಐವಿ ನಿಯಂತ್ರಣ ಅಧಿಕಾರಿ ಡಾಕ್ಟರ್ ಚಿದಾನಂದ ಸಂಜು ಸರಕಾರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ ಉಡುಪಿ ಇವರು ಗರ್ಭಿಣಿ ಸ್ತ್ರೀಯರಲ್ಲಿ ಎಚ್ಐವಿ ಸೋಂಕಿದ್ದರೆ ಆಸ್ಪತ್ರೆಯಲ್ಲಿ ಹೆರಿಗೆ ಆಗಬೇಕು. ಮಕ್ಕಳಿಗೆ ಅದನ್ನು ಬರದಂತೆ ಯಾವ ರೀತಿ ತಡೆಗಟ್ಟಬಹುದು, ತಾಯಿ ಮತ್ತು ಮಗುವನ್ನು ಹೇಗೆ ರಕ್ಷಣೆ ಮಾಡಬಹುದು, ಅಲ್ಲಿ ಸಿಗುವ ಅನುಕೂಲಗಳೇನು ಎಂಬುದರ ಕುರಿತು ಮಾಹಿತಿ ನೀಡಿ ನೆರೆದಿರುವ ಸುಮಾರು 51 ಗರ್ಭಿಣಿ ಸ್ತ್ರೀಯರಿಗೆ ಮತ್ತು ಅವರ ಮನೆಯವರಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಸರಕಾರಿ ಹೆಂಗಸರ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾಕ್ಟರ್ ರಾಜಗೋಪಾಲ ಭಂಡಾರಿ, ಪ್ರಸೂತಿ ತಜ್ಞೆ ಡಾಕ್ಟರ್ ಉಷಾ, ಕಟಪಾಡಿ ರೋಟರಿ ಕ್ಲಬ್‌ನ ಕಾರ್ಯದರ್ಶಿ ಶಕುಂತಲಾ ಎ. ಪೂಜಾರಿ ,ಶ್ರೀಕರನ್ ಅಂಚನ್, ತುಳಸಿ ದೇವಾಡಿಗ, ಉಪಸ್ಥಿತರಿದ್ದರು .ಈ ಕಾರ್ಯಕ್ರಮದಲ್ಲಿ ಶ್ರೀಮತಿ ರೋಷಣಿ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ, ಎಲ್ಲರನ್ನು ಸ್ವಾಗತಿಸಿದರೆ, ನಿವೃತ್ತ ನರ್ಸಿಂಗ್ ಸೂಪ ರೀ ಡೆಂಟ್ ರೂ .ಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು. ಶುಶ್ರೂಷ ಅಧಿಕಾರಿಜ್ಯೋತಿ ಮೊಗೇರ್ತಿ ಧನ್ಯವಾದ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು