Recent Posts

Monday, January 20, 2025
ಸುದ್ದಿ

ಗೆಲುವಿನ ಅಂತರದ ಸಂಖ್ಯೆಯನ್ನೇ ಕಾರಿನ ನಂಬ್ರವಾಗಿಸುವ ಮೂಲಕ ಗಮನ ಸೆಳೆದ ಶಾಸಕರು – ಕಹಳೆ ನ್ಯೂಸ್

ಕೇರಳ ವಿಧಾನಸಭೆಗೆ 2016 ರಲ್ಲಿ ನಡೆದ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದ ಫಲಿತಾಂಶ ರಾಷ್ಟ್ರ ರಾಜಕಾರಣದ ಗಮನಸೆಳೆದಿತ್ತು. ಕೊನೆಯ ಮತಗಟ್ಟೆ ತನಕದ ಎಣಿಕೆ ಮುಗಿಯುವರೆಗೂ ಎಲ್ಲರೂ ಮಂಜೇಶ್ವರವನ್ನು ಕುತೂಹಲದಿಂದ ನೋಡುವಂತಾಗಿತ್ತು. ಆದರೆ ಅಂತಿಮ ಫಲಿತಾಂಶ ಹೊರಬಿದ್ದಾಗ ಪಿ.ಬಿ.ಅಬ್ದರ‍್ರಝಾಕ್ 89 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.

ಈ ರೋಚಕ ಗೆಲುವಿನ ಈ ಅಂತರವನ್ನು ತನ್ನ ಕಾರಿನ ನೋಂದಣಿ ಸಂಖ್ಯೆಯಾಗಿಸುವ ಮೂಲಕ ರಝಾಕ್ ಗಮನ ಸೆಳೆದಿದ್ದರು.ಚುನಾವಣೆಯಲ್ಲಿ ಪಿ.ಬಿ.ಅಬ್ದರ‍್ರಝಾಕ್ 56,870 ಮತಗಳನ್ನು ಗಳಿಸಿದ್ದರೆ, ಅವರಿಗೆ ಪ್ರಬಲ ಸ್ಪರ್ಧೆಯೊಡ್ಡಿದ್ದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ 56,781 ಮತಗಳನ್ನು ಗಳಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದಿನ ಚುನಾವಣೆಗಳಲ್ಲೂ ಮಂಜೇಶ್ವರದಲ್ಲಿ ಒಂದಿಷ್ಟು ನಿರೀಕ್ಷೆಯೊಂದಿಗೆ ಸ್ಪರ್ಧಿಸುತ್ತಿದ್ದ ಬಿಜೆಪಿಗೆ 2016 ರಲ್ಲಿ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿತ್ತು. ಆದರೆ ಅಂತಿಮವಾಗಿ ಅದೃಷ್ಟ ಮಾತ್ರ ಪಿ.ಬಿ.ಅಬ್ದರ‍್ರಝಾಕ್ ಅವರದ್ದಾಗಿತ್ತು. ಈ ರೋಚಕ ಗೆಲುವಿನ ಅಂತರದ ಸಂಖ್ಯೆಯನ್ನೇ ತನ್ನ ಕಾರಿನ ನಂಬ್ರವಾಗಿಸುವ ಮೂಲಕ ಶಾಸಕರು ಗಮನ ಸೆಳೆದಿದ್ದಾರೆ.

ಆದರೆ ಈ ಚುನಾವಣೆಯಲ್ಲಿ ನಕಲಿ ಮತದಾನವಾಗಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಹೈಕೋರ್ಟ್ ಮೆಟ್ಟಲೇರಿದ್ದು, ಕಾನೂನು ಹೋರಾಟ ನಡೆಯುತ್ತಿದೆ.