ಪುತ್ತೂರು ಸಂತಫಿಲೋಮಿನಾ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಹಾಗೂ ಕೆದಂಬಾಡಿಯ ಗ್ರಾಮಪಂಚಾಯತ್ ಇವುಗಳ ಜಂಟಿ ಆಶ್ರಯದಲ್ಲಿ &39;ಚಂದ್ರಾನ್ವೇಷಣೆ 39; ಎಂಬ ಖಗೋಳ ವೀಕ್ಷಣೆ ಕಾರ್ಯಕ್ರಮವನ್ನು ತಿಂಗಳಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಯಿತು. ಕಾಲೇಜಿನ ದತ್ತು ಗ್ರಾಮವಾದ ಕೆದಂಬಾಡಿಯ ಶಾಲಾ ವಿದಾರ್ಥಿಗಳಿಗೆ ಹಾಗೂ ಆಸಕ್ತ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಪೂರ್ಣಚಂದ್ರನ ರೂಪವನ್ನು ಅತ್ಯಾಧುನಿಕ ದೂರದರ್ಶಕದ ಮೂಲಕ ವೀಕ್ಷಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿಶ್ರಾಂತ ಉಪ-ಪ್ರಾಂಶುಪಾಲರಾದ ಡಾ।ಎ. ಪಿ. ರಾಧಾಕೃಷ್ಣರವರು ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ಅನೇಕ ಖಗೋಳ ವಿದ್ಯಮಾನಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗೆ ಖಗೋಳಾಸಕ್ತಿ ಮೂಡಿಸುವ ಉದ್ಧೇಶದಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅವರು ಭೂಮಿ ಹಾಗೂ ಚಂದ್ರನ ಉಗಮ, ಚಂದ್ರಯಾನ ಕಾರ್ಯಕ್ರಮ, ದೈನಂದಿನ ಜೀವನದಲ್ಲಿ ಮಾನವನಿರ್ಮಿತ ಉಪಗ್ರಹಗಳ ಪಾತ್ರ ಮುಂತಾದ ವಿಷಯಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಸ್ ಮೊಂತೆರೋರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಜಾತಾ ಎನ್, ಗ್ರಾಮಪಂಚಾಯತ್ ಅಧ್ಯಕ್ಷೆ, ಅಜಿತ್ ಜಿ.ಕೆ., ಪಿಡಿಓ ಮತ್ತು ಶಾಲಾಭಿವೃದ್ಧಿ ಸಮಿತಿಸದಸ್ಯರುಗಳು, ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ।ಚಂದ್ರಶೇಖರ್ ಕೆ., ವಿಪಿನ್ ನಾಯ್ಕ್, ಅಭಿಷೇಕ್ ಸುವರ್ಣ, ಸುಜಿತ್ ಎಸ್., ನವೀನ್ ಡಿ ಸೋಜಾ, ಪ್ರತಿಭಾ ಕೆ ಮುಂತಾದವರು ಉಪಸ್ಥಿತರಿದ್ದರು.