Sunday, November 24, 2024
ಸುದ್ದಿ

ಫೆ.24ರಂದು ರೋಟರ್ಯಾಕ್ಟ್ ಕ್ಲಬ್ ನಿಂದ ಕರೋಕೆ ಗಾಯನ – ಕಹಳೆ ನ್ಯೂಸ್

ಮೂಡುಬಿದಿರೆ: ರೋರ‍್ಯಾಕ್ಟ್ ಕ್ಲಬ್ ಮೂಡುಬಿದಿರೆ ಇದರ ಸುವರ್ಣ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಫೆಬ್ರವರಿ 24ರಂದು ಸಮಾಜ ಮಂದಿರದಲ್ಲಿ ಕರೋಕೆ ಗಾಯನ ಹಾಗೂ ಫ್ಯಾಶನ್ ಶೋ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಫರಾಝ್ ಬೆದ್ರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಗಾನ ಸುಧಾ ಸುದರ್ಶನ್ ಹೆಸರಿನಲ್ಲಿ ಕರೋಕೆ ಗಾಯನ ಮುಕ್ತ ಸ್ಪರ್ಧೆ ನಡೆಯಲಿದೆ. ಜಿಲ್ಲೆ, ಹೊರಜಿಲ್ಲೆಯವರು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಸಲಾಗಿದೆ. ಫೆಬ್ರವರಿ 11ಕ್ಕೆ ಸಮಾಜ ಮಂದಿರದಲ್ಲಿ ನಡೆಯುವ ಅರ್ಹತಾ ಸುತ್ತಿನಲ್ಲಿ 12 ಮಂದಿ ಸ್ಪರ್ಧಿಗಳನ್ನು ಫೈನಲ್‌ಗೆ ಆಯ್ಕೆ ಮಾಡಲಾಗುವುದು. ಸ್ಥಳದಲ್ಲೆ ಹೆಸರು ನೋಂದಾಯಿಸಬಹುದು. ಫೈನಲ್‌ನಲ್ಲಿ ಪ್ರತಿ ಗಾಯಕರಿಗೆ ಕನ್ನಡ ಸಹಿತ ಮೂರು ಭಾಷೆಗಳಲ್ಲಿ ಹಾಡುಗಳನ್ನು ಹಾಡಲು ಅವಕಾಶವಿರುತ್ತದೆ ಎಂದು ಸ್ಪರ್ಧೆಯ ಸಂಯೋಜಕ ನವೀನ್ ಟಿ.ಆರ್ ಹೇಳಿದರು.
ಫ್ಯಾಶನ್ ಶೋ sಸ್ಪರ್ಧೆ ನಡೆಯಲಿದ್ದು 10ರಿಂದ 17 ವರ್ಷದೊಳಗಿನ ಬಾಲಕರಿಗೆ `ಮಿಸ್ಟರ್ ಟೀನ್’ ಮತು ಅದೇ ವಿಭಾಗದ ಬಾಲಕಿಯರಿಗೆ `ಮಿಸ್ ಟೀನ್’ ಸ್ಪರ್ಧೆ ಹಾಗೂ 18ರಿಂದ 25 ವರ್ಷದೊಳಗಿನವರಿಗೆ `ಮಿಸ್ಟರ್ ಮೂಡುಬಿದಿರೆ’ ಮತ್ತು `ಮಿಸ್ ಮೂಡುಬಿದಿರೆ’ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಸ್ಪರ್ಧಿಗಳಿಗೆ ಆನ್ಲೈಲ್ ನಲ್ಲಿ ಅರ್ಹತಾ ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಭಾವಚಿತ್ರಗಳೊಂದಿಗೆ ಹೆಸರು ನೋಂದಾಯಿಸಲು ಫೆಬ್ರವರಿ 10 ಕಡೇ ದಿನವಾಗಿರುತ್ತದೆ. ಸ್ಪರ್ಧೆಗೆ ಪ್ರವೇಶ ಶುಲ್ಕ ಇರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವರಗಳಿಗೆ ಫರಾಝ್ ಮೊಬೈಲ್ ಸಂಖ್ಯೆ 8095239231 ಸಂಪರ್ಕಿಸಬಹುದೆAದು ತಿಳಿಸಿದರು.

ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಇದರ ಕೊರಿಯೊಗ್ರಾಫರ್ ಅನೀಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.