Recent Posts

Monday, January 20, 2025
ಸುದ್ದಿ

ಕಂಠೀರವ ಕ್ರೀಡಾಂಗಣದಲ್ಲಿ ನವೀಕರಣಗೊಂಡ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ – ಕಹಳೆ ನ್ಯೂಸ್

ಬೆಂಗಳೂರು: ಕಂಠೀರವ ಕ್ರೀಡಾಂಗಣ ಮಾದರಿಯಲ್ಲೇ ನಗರದ ನಾಲ್ಕು ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು 17 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ಕಂಠೀರವ ಕ್ರೀಡಾಂಗಣದಲ್ಲಿ ನವೀಕರಣಗೊಂಡ ಒಳಾಂಗಣ ಕ್ರೀಡಾಂಗಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಬಜೆಟ್‍ನಲ್ಲಿ ಕಂಠೀರವ ಕ್ರೀಡಾಂಗಣ ಮಾದರಿಯಲ್ಲೇ ನಗರದ ದೇವನಹಳ್ಳಿ, ತಾವರೆಕೆರೆ, ಗುಂಜೂರು, ಎಚ್.ಎಸ್.ಆರ್. ಲೇಔಟ್‍ನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗಿದ್ದು, ಎರಡು ಕಡೆಗಳಲ್ಲಿ ಕೆಲಸ ಶುರು ಮಾಡುವ ಹಂತ ತಲುಪುದ್ದೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಠೀರವ ಕ್ರೀಡಾ ಸಂಕಿರ್ಣವನ್ನು ಅಭಿವೃದ್ಧಿ ಪಡಿಸಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಇಲ್ಲಿನ ಶೌಚಾಲಯ ಮರುನಿರ್ಮಾಣಕ್ಕೆ 2 ಕೋಟಿ ರೂ. ವೆಚ್ಚ ಮಾಡಲಾಗಿದೆ. 10 ವರ್ಷ ಹಳೆಯ ಸಿಂಥೆಟಿಕ್ ಟ್ರಾಕ್ ಮೇಲ್ದರ್ಜೆಗೇರಿಸಲು, 3.5 ಕೋಟಿ ರೂ.ಗೆ ಟೆಂಡರ್ ಕರೆಯಲಾಗಿದೆ. ಒಂದು ತಿಂಗಳೊಳಗಾಗಿ ಕೆಲಸ ಪ್ರಾರಂಭ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಠೀರವ ಕ್ರೀಡಾಂಗಣವನ್ನು 5.77 ಕೋಟಿ ರೂ. ವೆಚ್ಚದಲ್ಲಿ ನವೀಕರಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಇದರ ಭಾಗವಾಗಿ ಮೂರು ಬ್ಯಾಸ್ಕೆಟ್ ಬಾಲ್ ಕೋಟ್‍ನನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲಾಗಿದೆ. ಇಂಡಿಯನ್ ಪಾರ್ಲಿಮೆಂಟರಿ ಕಮಿಟಿ ಭೇಟಿ ನೀಡಿ ಈ ಅಂಗಣಕ್ಕೆ ಶ್ಲಾಘನೆ ವ್ಯಕ್ತಪಡಿಸಿದೆ.

ಜೊತೆಗೆ ಮೇಲ್ದರ್ಗೆ ಏರಿಸಿರುವ ಬ್ಯಾಡ್ಮಿಂಟನ್ ಕೋರ್ಟ್ ಗಳಿಗೆ ನ್ಯಾಷನಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ 5 ಸ್ಟಾರ್ ಕೊಟ್ಟಿದೆ ಎಂದರು. ಕಂಠೀರವ ಸ್ಟೇಡಿಯಂನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಜಿಮ್ ನಿರ್ಮಿಸಿದ್ದು, ಅಮೆರಿಕದಿಂದ ಉಪಕರಣ ತರಿಸಿದ್ದೇವೆ. ಇನ್ನೊಂದು ವಾರದಲ್ಲಿ ಇದನ್ನು ಉದ್ಘಾಟಿಸಲಾಗುವುದು ಎಂದರು.